RRR. ರೌದ್ರ ರಣಂ ರುಧಿರ. ರಾಜಮೌಳಿ-ಎನ್ಟಿಆರ್-ರಾಮ್ಚರಣ್ತೇಜ ಕಾಂಬಿನೇಷನ್ ಸಿನಿಮಾ. ಅಜಯ್ ದೇವಗನ್, ಅಲಿಯಾ ಭಟ್ ಕೂಡಾ ನಟಿಸಿರುವ 2021ರ ಬಹುನಿರೀಕ್ಷಿತ ಸಿನಿಮಾ RRR ಈ ಚಿತ್ರವನ್ನು ಕರ್ನಾಟಕಕ್ಕೆ ಹೊತ್ತು ತರುತ್ತಿರುವುದು ಕೆಜಿಎಫ್ ಮೂಲಕ ಸೆನ್ಸೇಷನ್ ಸೃಷ್ಟಿಸಿರುವ ಹೊಂಬಾಳೆ ಫಿಲಂಸ್.
ಒಂದು ಮೂಲದ ಪ್ರಕಾರ RRR ಚಿತ್ರವನ್ನು ಹೊಂಬಾಳೆ ಫಿಲಂಸ್ 60 ಕೋಟಿಗೆ ಖರೀದಿಸಿದ್ದು, ಕರ್ನಾಟಕದಲ್ಲಿ ವಿತರಣೆ ಮಾಡಲಿದೆ. ಕೆಜಿಎಫ್ ಚಿತ್ರದ ಪ್ರಮೋಷನ್ನಿನಲ್ಲಿ ಸ್ವತಃ ರಾಜಮೌಳಿ ಕಾಣಿಸಿಕೊಂಡಿದ್ದರು. ರಾಜಮೌಳಿಯವರ ಬಾಹುಬಲಿ ನಿರ್ಮಾಪಕರೇ ಆಗ ಕೆಜಿಎಫ್ ಚಾಪ್ಟರ್1ನ್ನು ಆಂಧ್ರ, ತೆಲಂಗಾಣದಲ್ಲಿ ವಿತರಣೆ ಮಾಡಿದ್ದರು. ಈಗ ವಿಜಯ್ ಕಿರಗಂದೂರು ಕನ್ನಡದಲ್ಲಿ RRR ಹೊತ್ತು ತರುತ್ತಿದ್ದಾರೆ. ಅಂದಹಾಗೆ RRR ಕನ್ನಡದಲ್ಲೂ ಡಬ್ ಆಗಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.