ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ, ಇಂದಿನಿಂದ ರಾಬರ್ಟ್ ವಿಜಯಯಾತ್ರೆ ಶುರುವಾಗಬೇಕಿತ್ತು. ಬಾಕ್ಸಾಫೀಸ್‍ನಲ್ಲಿ ದೂಳೆಬ್ಬಿಸಿರುವ ರಾಬರ್ಟ್ ವಿಜಯಯಾತ್ರೆಗೆ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದ ಚಿತ್ರತಂಡ, ಕಡೆಯ ಗಳಿಗೆಯಲ್ಲಿ ವಿಜಯಯಾತ್ರೆಯನ್ನು ರದ್ದು ಮಾಡಿದೆ.
ಹೆಚ್ಚು ಜನ ಸೇರಬಾರದು, ಕೊರೊನಾ ಹೆಚ್ಚುತ್ತಿದೆ. ದಯವಿಟ್ಟು ಜಾಗ್ರತೆಯಿಂದಿರಿ ಎಂಬ ಸರ್ಕಾರದ ಮನವಿಯೇ ಈ ವಿಜಯಯಾತ್ರೆ ನಿಲ್ಲಲು ಕಾರಣ. ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆಯಾದ ಮೇಲೆ ವಿಜಯಯಾತ್ರೆ ಮಾಡೋಣ ಎಂದು ಹೇಳಿದ್ದಾರೆ ದರ್ಶನ್. ಯಾವಾಗ ಮಾಡಿದರೇನು.. ದರ್ಶನ್ ಎಂಟ್ರಿ ಕೊಟ್ಟ ಕ್ಷಣ.. ಜಾತ್ರೆ ಶುರು. ವೇಯ್ಟಿಂಗ್ ಎನ್ನುತ್ತಿದ್ದಾರೆ ಡಿ ಫ್ಯಾನ್ಸ್.