` ಮದುವೆ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ಚೈತ್ರಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಮದುವೆ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ಚೈತ್ರಾ
ಮದುವೆ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ಚೈತ್ರಾ

ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಪರಿಚಿತವಾದ ಮುಖ ಚೈತ್ರಾ ಕೊಟ್ಟೂರು. ಧಾರಾವಾಹಿ, ಆಲ್ಬಂ, ನಿರ್ದೇಶನ ಹೀಗೆ.. ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಚೈತ್ರಾ, ನಾಗಾರ್ಜುನ್ ಎಂಬುವವರನ್ನು ಮದುವೆಯಾಗಿದ್ದಾರೆ. ಮಂಡ್ಯ ಮೂಲದ ಹುಡುಗ, ರಿಯಲ್ ಎಸ್ಟೇಟ್ ಉದ್ಯಮಿ ನಾಗಾರ್ಜುನ್ ಎಂಬುವವರನ್ನು ಭಾನುವಾರ ಬೆಳಗ್ಗೆ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು ಚೈತ್ರಾ. ಸರಳವಾಗಿ ನಡೆದ ವಿವಾಹ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

chaitra_jottur2.jpgನಾಗಾರ್ಜುನ್ ಅವರಿಂದ ಬಲವಂತವಾಗಿ ತಾಳಿ ಕಟ್ಟಿಸಿಕೊಂಡಿದ್ದಾರೆ ಎನ್ನುವುದು ನಾಗಾರ್ಜುನ್ ಕುಟುಂಬದವರ ದೂರು. ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಾಳಿ ಕಟ್ಟಿದ್ದ ನಾಗಾರ್ಜುನ್, ನನಗೆ ಚೈತ್ರಾ ಜೊತೆ ಮದುವೆ ಇಷ್ಟವಿಲ್ಲ ಎನ್ನುತ್ತಿದ್ದಾರಂತೆ. ನನಗೆ ನಾಗಾರ್ಜುನ್ ಅವರೇ ಬೇಕು ಎನ್ನುತ್ತಿದ್ದಾರೆ ಚೈತ್ರಾ ಕೊಟ್ಟೂರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery