ಪಾತ್ರ ಯಾವುದೇ ಇರಲಿ.. ಶ್ರೀನಗರ ಕಿಟ್ಟಿ ಅದರೊಳಕ್ಕೆ ಇಳಿಯೋದ್ರಲ್ಲಿ ಎಕ್ಸ್‍ಪರ್ಟ್. ಇಂತಿ ನಿನ್ನ ಪ್ರೀತಿಯ ಕುಡುಕ, ಸವಾರಿಯ ಬೈಕ್ ಕಳ್ಳ, ಹುಡುಗರು ಚಿತ್ರದ ಗೆಳೆಯನ ಪಾತ್ರ, ಮತ್ತೆ ಮುಂಗಾರುವಿನ ಅಸಹಾಯಕ ಪ್ರೇಮಿ, ಬಹುಪಾರ್‍ಕನ ಹಲವು ಶೇಡ್‍ಗಳ ರೋಲ್.. ಹೀಗೆ.. ಈ ಭಾರಿ ಮತ್ತೊಮ್ಮೆ ಡಿಫರೆಂಟ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಗೌಳಿಯಾಗಿ...
ಗೌಳಿ, ಶ್ರೀನಗರ ಕಿಟ್ಟಿ ನಟಿಸುತ್ತಿರುವ ಹೊಸ ಸಿನಿಮಾ. ಸೋಹನ್ ಫಿಲ್ಮ್ ಫ್ಯಾಕ್ಟರಿಯ ರಘು ಸಿಂಗಂ ನಿರ್ಮಾಣದ ಗೌಳಿಯ ಫಸ್ಟ್ ಲುಕ್ ಹೊರಬಂದಿದ್ದು, ಶ್ರೀನಗರ ಕಿಟ್ಟಿಯ ಲುಕ್ ಅಬ್ಬಾ ಎನ್ನಿಸುವಂತಿದೆ. ರಕ್ತ ಸಿಕ್ತ ಅಧ್ಯಾಯದ ಕಥೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲದಂತಹ ಲುಕ್ ಹೊರಬಿದ್ದಿದೆ. ಸೂರಾ ನಿರ್ದೇಶಿಸುತ್ತಿರುವ ಚಿತ್ರದ ಉಳಿದ ಕಲಾವಿರದ ಟೀಂ ಇನ್ನೂ ಫೈನಲ್ ಆಗಿಲ್ಲ.