ರಣಂ, ಕನಕಪುರ ಶ್ರೀನಿವಾಸ್ ಬ್ಯಾನರ್ ಸಿನಿಮಾ. ತೆಲುಗಿನಲ್ಲಿ ಜ್ಯೂ.ಎನ್‍ಟಿಆರ್ ಜೊತೆ ಸುಬ್ಬು, ಕನ್ನಡದಲ್ಲಿ ಶಿವರಾಜ್ ಕುಮಾರ್ ಜೊತೆ ಯುವರಾಜ ಚಿತ್ರದಿಂದ ಶುರುವಾದ ಸಿನಿಮಾ ಜರ್ನಿಯಲ್ಲಿ ಇದುವರೆಗೆ 20 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಕನಕಪುರ ಶ್ರೀನಿವಾಸ್. ರಣಂ, ಆರ್‍ಎಸ್ ಪ್ರೊಡಕ್ಷನ್ಸ್‍ನ 21ನೇ ಸಿನಿಮಾ.
ಚಿರಂಜೀವಿ ಸರ್ಜಾ, ಆ ದಿನಗಳು ಚೇತನ್, ವರಲಕ್ಷ್ಮಿ ಶರತ್ ಕುಮಾರ್, ನೀತೂ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಇದೀಗ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ರೈತ ಹೋರಾಟದ ಕಥೆಯಿದೆ. ವಿ. ಸಮುದ್ರ ಚಿತ್ರದ ನಿರ್ದೇಶಕ.
ನನ್ನ 20 ಚಿತ್ರಗಳಲ್ಲಿ 10 ಸಿನಿಮಾಗಳು 100 ದಿನ ಓಡಿವೆ. ರಣಂ ಕೂಡಾ ಖಂಡಿತಾ ಶತದಿನೋತ್ಸವ ಆಚರಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಶ್ರೀನಿವಾಸ್.