ರೋರಿಂಗ್ ಸ್ಟಾರ್ ಮುರಳಿ ನಟನೆಯ ಹೊಸ ಸಿನಿಮಾ ಮದಗಜ. ಆ ಚಿತ್ರಕ್ಕೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಕ. ಅವರಿಗೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಕಾರ್‍ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಂದಹಾಗೆ ಮದಗಜ ಚಿತ್ರಕ್ಕೂ ಉಮಾಪತಿ ಅವರೇ ಪ್ರೊಡ್ಯೂಸರ್.
ಮದಗಜ ಚಿತ್ರದ ನಿರ್ದೇಶಕರಾದರೂ, ರಾಬರ್ಟ್ ಚಿತ್ರದ ಪ್ರಚಾರ, ಪೈರಸಿ ವಿರುದ್ಧದ ಹೋರಾಟ ಸೇರಿದಂತೆ ಪ್ರತಿ ಹಂತದಲ್ಲೂ ರಾಬರ್ಟ್ ಟೀಂ ಜೊತೆಯಲ್ಲಿದ್ದವರು ಮಹೇಶ್. ಅದರ ಎಫೆಕ್ಟ್ ಪ್ರತಿ ಹಂತದಲ್ಲೂ ಗೋಚರಿಸಿತ್ತು ಕೂಡಾ.
ಇದರಿಂದ ಖುಷಿಯಾಗಿರುವ ನಿರ್ಮಾಪಕ ಉಮಾಪತಿ ತಮ್ಮ ನಿರ್ದೇಶಕರಿಗೆ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಇದು ಮಹೇಶ್ ಅವರ ಮೊದಲ ಕಾರ್ ಎನ್ನುವುದು ವಿಶೇಷ. ತಮಗೆ ಕಾರ್ ಗಿಫ್ಟ್ ಕೊಟ್ಟ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ ಮಹೇಶ್ ಕುಮಾರ್.