ಸಲಗ ಚಿತ್ರದಲ್ಲಿ ದುನಿಯಾ ವಿಜಿಯಂತಾ ಸೀನಿಯರ್ ಆಕ್ಟರ್ ಜೊತೆ ನಟಿಸಿರುವ ಸಂಜನಾ ಆನಂದ್, ಈಗ ಅದ್ಧೂರಿ ಲವರ್ ಚಿತ್ರದಲ್ಲಿ ಸ್ಟೂಡೆಂಟ್ ಆಗಿದ್ದಾರೆ. ಚಿತ್ರದಲ್ಲಿನ ನನ್ನ ಪಾತ್ರ ಬಬ್ಲಿಯಾಗಿದೆ ಎಂದಿರೋ ಸಂಜನಾ, ಇದು ಸಖತ್ ನಾಟಿ ಹುಡುಗಿಯ ಪಾತ್ರ. ಒಂಥರಾ ಹೀರೋಯಿನ್ ಓರಿಯಂಟೆಡ್ ಎನಿಸುತ್ತೆ. 9 ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನನಗೆ ಹೊಸದು ಎಂದಿದ್ದಾರೆ ಸಂಜನಾ ಆನಂದ್.
ಅದ್ಧೂರಿ ಲವರ್, ಎ.ಪಿ.ಅರ್ಜುನ್ ಮೂವಿ. ಕಿಸ್ ಚಿತ್ರದ ನಂತರ ಮತ್ತೊಮ್ಮೆ ನಿರ್ಮಾಣಕ್ಕಿಳಿದಿರೋ ಅರ್ಜುನ್, ಕಿಸ್ಗಿಂತ ದೊಡ್ಡ ಹಿಟ್ ಕೊಡುವ ಭರವಸೆಯನ್ನಂತೂ ಹುಟ್ಟಿಸಿದ್ದಾರೆ. ಕಿಸ್ ಮೂಲಕ ತಾವೇ ಪರಿಚಯಿಸಿದ ವಿರಾಟ್ ಅವರನ್ನೇ ಅದ್ಧೂರಿ ಲವರ್ ಚಿತ್ರಕ್ಕೂ ಹೀರೋ ಮಾಡಿದ್ದಾರೆ ಅರ್ಜುನ್.