ಸಾರಥಿ ಅಂದ್ರೆ ಶ್ರೀಕೃಷ್ಣನೇ ಇರಬಹುದು.. ಆದರೆ ಕನ್ನಡಿಗರ ಕಣ್ಣ ಮುಂದೆ ಬರೋದು ದರ್ಶನ್. ಅಷ್ಟರಮಟ್ಟಿಗೆ ಸಾರಥಿ ಅನ್ನೋ ಹೆಸರಲ್ಲಿ ಮನೆಮಾತಾಗಿರೋ ದರ್ಶನ್, ತಮ್ಮ ಸಾರಥಿಯನ್ನು ಮರೆತಿಲ್ಲ. ದರ್ಶನ್ ಅವರ ಸಾರಥಿ ಯಾರು ಗೊತ್ತೇ.. ಸುಂದರ್ ರಾಜ್.
ಮೈಸೂರಿನ ಸುಂದರ್ ರಾಜ್ ಅವರಿಗೆ ಈಗ 80 ವರ್ಷ. ಕೆಎಸ್‍ಆರ್‍ಟಿಸಿ ಬಸ್ ಡ್ರೈವರ್ ಆಗಿದ್ದ ಸುಂದರ್ ರಾಜ್ ಅವರನ್ನು ಅವರ 80ನೇ ಹುಟ್ಟುಹಬ್ಬದ ದಿನ ಭೇಟಿ ಮಾಡಿದ್ದಾರೆ ದರ್ಶನ್. ದರ್ಶನ್ ಅವರ ಬಸ್ ರೂಟ್ ಡ್ರೈವರ್ ಆಗಿದ್ದ ಸುಂದರ್ ರಾಜ್ ಅವರಿಗೆ ಶುಭಾಶಯ ಕೋರಿ, ಅವರ ಆಶೀರ್ವಾದ ಪಡೆದಿದ್ದಾರೆ ದರ್ಶನ್. ಸುಂದರ್ ರಾಜ್, ದರ್ಶನ್ ಕಾಲದವರಿಗೆ.. ಪುಟ್ಟ ಪುಟ್ಟ ಮಕ್ಕಳಿಗೆ ಸುಂದರ್ ಮಾಮಾ ಎಂದೇ ಚಿರಪರಿಚತರು.