ನಟಿ ರಾಗಿಣಿ ದ್ವಿವೇದಿ ಈಗ ಪೊಲೀಸ್ ಆಫೀಸರ್ ಆಗಿದ್ದಾರೆ. ಅವರಿಗೆ ಪೊಲೀಸ್ ಆಗುವುದು ಹೊಸದೇನಲ್ಲ. ಈ ಹಿಂದೆ ತಮ್ಮದೇ ಹೆಸರಿನ ಚಿತ್ರದಲ್ಲಿ ಐಪಿಎಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದವರು ರಾಗಿಣಿ. ಈಗ ಮತ್ತೊಮ್ಮೆ ಜಾನಿ ವಾಕರ್ ಅನ್ನೋ ಸಿನಿಮಾದಲ್ಲಿ ಇನ್ವೆಸ್ಟಿಗೇಷನ್ ಆಫೀಸರ್ ಆಗುತ್ತಿದ್ದಾರೆ ರಾಗಿಣಿ.
ಡ್ರಗ್ಸ್ ದಂಧೆ ಆರೋಪದಲ್ಲಿ ಜೈಲು ವಾಸ ಮುಗಿಸಿ ಬಂದ ಮೇಲೆ ರಾಗಿಣಿ ನಟಿಸುತ್ತಿರುವ 2ನೇ ಸಿನಿಮಾ ಜಾನಿ ವಾಕರ್. ಈ ಮೊದಲು ಕರ್ವ 3ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ರಾಗಿಣಿ, ಈಗ ವೇದಿಕ್ ವೀರ್ ಅವರಿಗೆ ಓಕೆ ಎಂದಿದ್ದಾರೆ. ಜಾನಿ ವಾಕರ್ ನಿರ್ದೇಶಕ ವೇದಿಕ್ ವೀರ್, ಈ ಹಿಂದೆ ಮಫ್ತಿ ಚಿತ್ರದಲ್ಲಿ ಕೆಲಸ ಮಾಡಿದ್ದವರು. ಜಾನಿ ವಾಕರ್ ಮೂಲಕ ಡೈರೆಕ್ಟರ್ ಆಗುತ್ತಿದ್ಧಾರೆ.
ನನಗೆ ಇದು ಹೊಸ ಪಾತ್ರ. ಇದರಲ್ಲಿ ನಾನು ಇಂಡಿಯನ್ ಮತ್ತು ವೆಸ್ಟರ್ನ್ ಎರಡೂ ಸ್ಟೈಲ್ ಡ್ರೆಸ್ನಲ್ಲಿದ್ದೇನೆ. ನನ್ನ ಬಾಡಿ ಲಾಂಗ್ವೇಜ್ ಹೊಸದು. ನನ್ನ ಪಾತ್ರವೂ ಡೆವಲಪ್ ಆಗುತ್ತಾ ಆಗುತ್ತಾ.. ಕಥೆ ಓಪನ್ ಆಗುತ್ತದೆ. ಇಂತಹ ಸವಾಲಿನ ಪಾತ್ರಗಳಿಗೆ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ರಾಗಿಣಿ.