` ರಣಂಗೆ ಮೇಘನಾ ರಾಜ್ ಪ್ರಮೋಷನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಣಂಗೆ ಮೇಘನಾ ರಾಜ್ ಪ್ರಮೋಷನ್
Ranam Movie Image

ರಣಂ, ಇದೇ ಮಾರ್ಚ್ 26ಕ್ಕೆ ರಿಲೀಸ್ ಆಗುತ್ತಿರೋ ಸಿನಿಮಾ. ಈ ಸಿನಿಮಾ ಪ್ರಚಾರವನ್ನು ಸ್ವತಃ ಮೇಘನಾ ರಾಜ್ ಮಾಡುತ್ತಿರೋದು ವಿಶೇಷ. ಎಲ್ಲವೂ ಕರೆಕ್ಟ್ ಆಗಿದ್ದರೆ, ಕೊರೊನಾ ಬಾರದೇ ಹೋಗಿದ್ದರೆ, ಕಳೆದ ವರ್ಷವೇ ರಿಲೀಸ್ ಆಗಬೇಕಿದ್ದ ಸಿನಿಮಾ ರಣಂ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೊತೆಗೆ ಆ ದಿನಗಳು ಖ್ಯಾತಿಯ ಚೇತನ್, ವರಲಕ್ಷ್ಮಿ ಶರತ್ ಕುಮಾರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಮಾಣಿಕ್ಯ ಚಿತ್ರದ ನಂತರ ವರಲಕ್ಷ್ಮಿ ನಟಿಸಿರುವ ಸಿನಿಮಾ ರಣಂ. ಚಿತ್ರದಲ್ಲಿ ಚಿರು ದೇವದಾಸ್ ಅನ್ನೋ ಪೊಲೀಸ್ ಕ್ಯಾರೆಕ್ಟರ್ನಲ್ಲಿದ್ದಾರೆ.

ಇದೊಂದು ಸ್ಪೆಷಲ್ ಕ್ಯಾಮಿಯೋ ಸಿನಿಮಾ. ನನಗೆ ಚಿರು ಈ ಚಿತ್ರದ ಕೆಲವು ಸ್ಟಂಟ್ಸ್ ತೋರಿಸಿದ್ದರು. ನನಗಂತೂ ಬಹಳ ಇಷ್ಟವಾಗಿತ್ತು ಎಂದು ಹೇಳಿಕೊಂಡಿದ್ದಾರೆ ಮೇಘನಾ. ಸಮುದ್ರ ನಿರ್ದೇಶನದ ಸಿನಿಮಾದಲ್ಲಿ ನಟಿಸಿರುವ ಇನ್ನೊಬ್ಬ ನಟ ಬುಲೆಟ್ ಪ್ರಕಾಶ್, ಅವರೂ ಕೂಡಾ ಈಗಿಲ್ಲ.  ಸಿನಿಮಾ 250ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ರಿಲೀಸ್ ಆಗುತ್ತಿದೆ.