ಅವನೇ ಶ್ರೀಮನ್ನಾರಾಯಣ. 2019ರ ಅಂತ್ಯದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಸಿನಿಮಾ. ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾಗೆ ನಿರ್ಮಾಪಕರಾಗಿದ್ದವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ಈಗ ಆ ಚಿತ್ರ ನ್ಯಾಷನಲ್ ಲೆವೆಲ್ಲಿನಲ್ಲಿ ಅವಾರ್ಡುಗಳ ಪಟ್ಟಿಯಲ್ಲಿ ಸದ್ದು ಮಾಡಿದೆ.
2019ನೇ ಸಾಲಿನ ರಾಷ್ಟ್ರೀಯ ಪುರಸ್ಕಾರಗಳಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ ಪ್ರಶಸ್ತಿ ಪುರಸ್ಕಾರ ಸಿಕ್ಕಿದೆ. ವಿಕ್ರಂ ಮೋರ್ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿದ್ದರು.
ರಕ್ಷಿತ್ ಶೆಟ್ಟಿ ಗರಡಿಯ ಸಚಿನ್ ನಿರ್ದೇಶಿಸಿದ್ದ ಸಿನಿಮಾಗೆ ರಕ್ಷಿತ್ ಶೆಟ್ಟಿ ಹೀರೋ ಆಗಿದ್ದರೆ, ಶಾನ್ವಿ ಶ್ರೀವಾಸ್ತವ್ ಹೀರೋಯಿನ್. ಚಿತ್ರದ ಕಥೆಯಷ್ಟೆ ಅಲ್ಲ, ವಿಭಿನ್ನ ಶೈಲಿಯ ಸ್ಟಂಟ್ಸ್ ಎಲ್ಲರ ಮೆಚ್ಚುಗೆ ಗಳಿಸಿತ್ತು.