ರಾಬರ್ಟ್ ಚಿತ್ರವನ್ನು ಅತಿ ದೊಡ್ಡ ಮಟ್ಟದಲ್ಲಿ ಪ್ರಮೋಷನ್ ಮಾಡಿದ ಹಾಡು ಕಣ್ಣೂ ಹೊಡಿಯಾಕ..
ಯೋಗರಾಜ್ ಭಟ್ಟರ ಉತ್ತರ ಕರ್ನಾಟಕ ಶೈಲಿಯಲ್ಲಿದ್ದ ಹಾಡು ಹಿರೀರು ಕಿರೀರು ಅನ್ನದೆ ಎಲ್ಲರಿಗೂ ಹುಚ್ಚನ್ನೇ ಹಿಡಿಸಿದ್ದಾಯ್ತು. ಆ ಹಾಡು ಈಗ ಇನ್ನೂ ಒಂದು ದಾಖಲೆ ಬರೆದುಬಿಟ್ಟಿದೆ. ಯೂಟ್ಯೂಬ್‍ನಲ್ಲಿ ಹಾಡನ್ನು ನೋಡಿದವರ ಸಂಖ್ಯೆ 2 ಕೋಟಿ ದಾಟಿದೆ.
ಇದು ಅಧಿಕೃತ ಯೂಟ್ಯೂಬ್ ಪೇಜ್ ಸಂಖ್ಯೆ. ಈ ಹಾಡನ್ನು ಬೇಸ್ ಆಗಿಟ್ಟುಕೊಂಡು ಇನ್ನೊಂದಿಷ್ಟು ಜನ ಫೇಸ್‍ಬುಕ್ಕಿನಲ್ಲಿ ರೀಮಿಕ್ಸ್ ಮಾಡುತ್ತಿದ್ದಾರೆ. ಅಣ್ಣಾವ್ರ ಸಂಪತ್ತಿಗೆ ಸವಾಲ್ ಚಿತ್ರದ ಹಾಡು, ಅಂಬರೀಷ್-ಮಾಲಾಶ್ರೀ ಡಾನ್ಸ್ ಇರುವ ಹಾಡಿನ ದೃಶ್ಯಕ್ಕೆ ಕಣ್ಣೂ ಹೊಡಿಯಾಕ ಟ್ರ್ಯಾಕ್ ಹಾಕಿ ಖುಷಿ ಪಡುತ್ತಿದ್ದಾರೆ. ಡಿಸೈನ್ ಡಿಸೈನ್ ರೂಪದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಿರೋ ರಾಬರ್ಟ್ ಹಾಡನ್ನು ಈ ಮಟ್ಟಕ್ಕೆ ಹಿಟ್ ಮಾಡಿದ್ದಕ್ಕೆ ಗಾಯಕಿ ಶ್ರೇಯಾ ಘೋಷಾಲ್, ಸಾಹಿತಿ ಯೋಗರಾಜ್ ಭಟ್ ಚಿತ್ರ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.