` ಉಪ್ಪಿ-ಶಶಾಂಕ್-ಹರಿಪ್ರಿಯಾ ಕಾಂಬಿನೇಷನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
 ಉಪ್ಪಿ-ಶಶಾಂಕ್-ಹರಿಪ್ರಿಯಾ ಕಾಂಬಿನೇಷನ್
Haripriya, Shashank, Upendra

ಒಂದು ಕಡೆ ರಿಯಲ್ ಸ್ಟಾರ್ ಉಪೇಂದ್ರ.. ಅವರಿಗೆ ಡೈರೆಕ್ಷನ್ ಹೇಳ್ತಿರೋದು ಡಿಫರೆಂಟ್ ಡೈರೆಕ್ಟರ್ ಶಶಾಂಕ್.. ಅವರ ಜೊತೆ ಕೈಜೋಡಿಸಿರೋದು ಪಾತ್ರ ಎಂಥದ್ದೇ ಇರಲಿ, ಪರಕಾಯ ಪ್ರವೇಶ ಮಾಡೋ ಹರಿಪ್ರಿಯಾ.. ಈ ಜೋಡಿಯ ಚಿತ್ರ ಇದೇ ಏಪ್ರಿಲ್‍ನಲ್ಲಿ ಸೆಟ್ಟೇರುತ್ತಿದೆ.

ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಬರಲಿದೆ. ಇದು ನನ್ನ ಮತ್ತು ಉಪ್ಪಿ ಸ್ಟೈಲ್ ಕಾಂಬಿನೇಷನ್ ಸಿನಿಮಾ. ಯುಗಾದಿ ದಿನ ಚಿತ್ರದ ಟೈಟಲ್ ಮತ್ತು ಫಸ್ಟ್‍ಲುಕ್ ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ ಶಶಾಂಕ್.

ಅಂದಹಾಗೆ ಕಳೆದ ವರ್ಷ ಉಪ್ಪಿ-ಶಶಾಂಕ್ ಜೋಡಿಯ ಚಿತ್ರವೊಂದು ಸೆಟ್ಟೇರಿತ್ತು. ಅದೇ ಬೇರೆ.. ಇದೇ ಬೇರೆ.. ಆ ಚಿತ್ರದ ಸುದ್ದಿ ಸದ್ಯಕ್ಕಿಲ್ಲ.