ಮ್ಯಾನ್ ಆಫ್ ದಿ ಮ್ಯಾಚ್. ಇದು ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಖ್ಯಾತಿಯ ಸತ್ಯಪ್ರಕಾಶ್ ಸಿನಿಮಾ. ಚಿತ್ರಕ್ಕೀಗ ಮುಹೂರ್ತವೂ ನೆರವೇರಿದೆ. ನಾದ ಬ್ರಹ್ಮ ಹಂಸಲೇಖ ಅವರು ಸತ್ಯಪ್ರಕಾಶ್ ಸಿನಿಮಾಗೆ ಕ್ಲಾಪ್ ಮಾಡಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಧನಂಜಯ್ ಮೊದಲಾದವರು ಹೊಸ ಚಿತ್ರಕ್ಕೆ ಶುಭ ಕೋರಿದರು.
`ಟೈಟಲ್ ನೋಡಿ ಏನೋ ಅಂದುಕೊಳ್ಳಬೇಡಿ. ಇದು ಸ್ಪೋಟ್ರ್ಸ್ ಸಿನಿಮಾ ಅಲ್ಲ. ಇದು ಒಂದು ದಿನದ ಕಥೆಯ ಸಿನಿಮಾ. ಒಂದೇ ಲೊಕೇಷನ್ನಿನಲ್ಲಿ ನಡೆಯೋ ಕಥೆ. ಪ್ರತಿದಿನವೂ ಒಬ್ಬೊಬ್ಬರಿಗೆ ಒಂದೊಂದು ಮ್ಯಾಚ್. ಆ ರೀತಿಯಲ್ಲಿ ಆ ದಿನ ಚಿತ್ರದಲ್ಲಿರೋ ಪಾತ್ರಗಳಿಗೆ ಮುಖ್ಯ. ಆ ದಿನ ಗೆಲ್ಲೋರು ಯಾರು ಅನ್ನೋದೇ ಚಿತ್ರದ ಕಥೆ. ಆಕ್ಚುಯಲಿ ಇದು ಸಿನಿಮಾದ ಅಡಿಷನ್ ಬ್ಯಾಕ್‍ಗ್ರೌಂಡ್‍ನಲ್ಲಿ ನಡೆಯೋ ಕತೆ' ಎಂದಿದ್ದಾರೆ ಸತ್ಯಪ್ರಕಾಶ್. ಚಿತ್ರದಲ್ಲಿ ಆಲ್‍ಮೋಸ್ಟ್ ರಾಮಾ ರಾಮಾ ರೇ ಟೀಂ ವರ್ಕ್ ಮಾಡ್ತಿದೆ.