ರಾಮನಗರದ ಗಾಂಧಿವಾಡಾದಲ್ಲಿನ ಹರಿಜನ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದರು. ಕಟ್ಟಡದ ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕ ವಿದ್ಯಾರ್ಥಿಗಳನ್ನು ಹೊರಗೆ ಹಾಕಿದ್ದ. ವಿದ್ಯಾರ್ಥಿನಿಯರು ಬೀದಿಯಲ್ಲಿ ಅಳುತ್ತಿದ್ದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಸುದೀಪ್ ಕಣ್ಣಿಗೂ ಬಿತ್ತು.
ತಕ್ಷಣ ಸುದೀಪ್ ಹುಬ್ಬಳ್ಳಿಯ ಗಾಂಧಿವಾಡ ಕಚೇರಿಗೆ ಭೇಟಿ ನೀಡುವಂತೆ ತಮ್ಮ ಚಾರಿಟಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಅವರಿಗೆ ಸೂಚಿಸಿದ್ರು. ರಮೇಶ್ ತಕ್ಷಣಕ್ಕೆ ಬಾಡಿಗೆ ಕಟ್ಟಡ ನೀಡುವ ಭರವಸೆ ಕೊಟ್ಟಿದ್ದಾರೆ. ಮಕ್ಕಳೊಂದಿಗೆ ಸ್ವತಃ ಸುದೀಪ್ ಕೂಡಾ ವಿಡಿಯೋ ಕಾಲ್‍ನಲ್ಲಿ ಮಾತನಾಡಿ ಧೈರ್ಯ ಹೇಳಿದ್ದಾರೆ.
ನಿಮ್ಮ ಜೊತೆ ನಾವಿದ್ದೇವೆ. ಬಾಡಿಗೆಯೋ.. ಸ್ವಂತ ಕಟ್ಟಡವೋ.. ಆಡಳಿತ ಮಂಡಳಿ ತೀರ್ಮಾನಿಸಿ ತಿಳಿಸಿದರೆ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ ಕಿಚ್ಚ ಸುದೀಪ್.