ಈಷ್ಟೇ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಅಪ್ಪಳಿಸಬಹುದಾಗಿದ್ದ ಅಪಾಯವೊಂದು ದೂರವಾಗುವ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ನಂತರ ಮಾತನಾಡಿರುವ ಸಿಎಂ ಯಡಿಯೂರಪ್ಪ, ನೋ ಲಾಕ್ ಡೌನ್, ನೋ ಸೀಲ್ ಡೌನ್ ಎಂದಿದ್ದಾರೆ. ಅಷ್ಟೇ ಅಲ್ಲ, ಚಿತ್ರಮಂದಿರಗಳಿಗೆ 50% ಪ್ರೇಕ್ಷಕರ ನಿರ್ಬಂಧ ಜಾರಿಯಾಗಬಹುದು ಎನ್ನುವ ಆತಂಕದಲ್ಲಿದ್ದವರಿಗೂ ರಿಲೀಫ್ ಕೊಟ್ಟಿದ್ಧಾರೆ.
ಈಗಿರುವ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಅನುಸರಿಸಿ. ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟೆನ್ಸ್ ಕಡ್ಡಾಯವಾಗಿ ಪಾಲಿಸಿ. ಸಿನಿಮಾ ಹಾಲ್ಗಳನ್ನು ಮುಚ್ಚುವ ಅಥವಾ ಪ್ರೇಕ್ಷಕರನ್ನು ನಿರ್ಬಂಧಿಸುವ ಆಲೋಚನೆಗಳು ಸದ್ಯಕ್ಕಿಲ್ಲ ಎಂದಿದ್ದಾರೆ ಯಡಿಯೂರಪ್ಪ.
ಹಾಗಂತ, ಕಂಪ್ಲೀಟ್ ರಿಲ್ಯಾಕ್ಸ್ ಆಗುವಂತೆಯೂ ಇಲ್ಲ. ಬೆಂಗಳೂರಿನಲ್ಲಂತೂ ದಿನೇ ದಿನೇ ಕೊರೊನಾ ಪಾಸಿಟಿವ್ ಕೇಸ್ ಹೆಚ್ಚುತ್ತಿವೆ. ಹೀಗಾಗಿ.. ಪರಿಸ್ಥಿತಿ ಇನ್ನಷ್ಟು ಗಂಭೀರವಾದರೆ ಸರ್ಕಾರ ಮತ್ತೊಮ್ಮೆ ಚಿತ್ರಮಂದಿರಗಳ ಮೇಲೆ ಕೆಂಗಣ್ಣು ಬೀರಿದರೂ ಆಶ್ಚರ್ಯವಿಲ್ಲ.