ಭಜರಂಗಿ 2 ಚಿತ್ರ ಹೆಚ್ಚೂ ಕಡಿಮೆ ರಿಲೀಸ್ ಆಗೋಕೆ ಸಿದ್ಧವಾಗಿದೆ. ಈಗಾಗಲೇ ಮೋಷನ್ ಪೋಸ್ಟರ್ ಮತ್ತು ಒಂದು ಪುಟ್ಟ ಟೀಸರ್‘ನಿಂದ ಬೆರಗು ಹುಟ್ಟಿಸಿರುವ ಸಿನಿಮಾ ಭಜರಂಗಿ 2. ಭಜರಂಗಿ ಹಿಟ್ ಆಗಿರೋ ಕಾರಣ ಹಾಗೂ ಅದೇ ಕಾಂಬಿನೇಷನ್ ರಿಪೀಟ್ ಆಗಿರುವ ಕಾರಣ ಚಿತ್ರದ ಮೇಲೆ ನಿರೀಕ್ಷೆಗಳೂ ಭಾರಿಯಾಗಿವೆ. ಈಗ ರಿಲೀಸ್ ಆಗಿರೋ ಹಾಡು ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಭಜರೇ ಭಜರಂಗಿ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಹಾಡಿರುವುದು ಶಂಕರ್ ಮಹಾದೇವನ್. ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಅಷ್ಟೇ ಚೆಂದದ ಮ್ಯೂಸಿಕ್ ಕೊಟ್ಟಿದ್ದಾರೆ ಅರ್ಜುನ್ ಜನ್ಯಾ. ಎ. ಹರ್ಷ ಅವರೇ ಕಥೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಜಯಣ್ಣ ಭೋಗೇಂದ್ರ ನಿರ್ಮಾಪಕರು. ಶಿವಣ್ಣ-ಜಯಣ್ಣ-ಹರ್ಷ ಕಾಂಬಿನೇಷನ್ನಿನ ಕಾರಣಕ್ಕೆ ಭಾರಿ ನಿರೀಕ್ಷೆ ಹುಟ್ಟಿಸಿರುವ ಭಜರಂಗಿ 2 ಮೇ 14ರಂದು ರಿಲೀಸ್ ಆಗುತ್ತಿದೆ. ಶಿವಣ್ಣ ಎದುರು ನಾಯಕಿಯಾಗಿ ಜಾಕಿ ಭಾವನಾ, ಮತ್ತೊಂದು ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಶ್ರುತಿ, ಭಜರಂಗಿ ಲೋಕೇಶ್, ಚೆಲುವರಾಜು ಮೊದಲಾದವರು ನಟಿಸಿದ್ದಾರೆ.