ಕೊರೊನಾ ಮತ್ತೆ ಕೆರಳದೇ ಹೋಗಿದ್ದರೆ ಮಾರ್ಚ್ 20ರಂದು ಮೈಸೂರಿನಲ್ಲಿ ಯುವರತ್ನ ದಸರಾ ನಡೆಯಬೇಕಿತ್ತು. ಆದರೆ, ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಯುವರತ್ನ ಸಂಭ್ರಮ ರದ್ದಾಗಿದೆ. ಅನುಮತಿಯೂ ಸಿಕ್ಕಿಲ್ಲ ಎನ್ನುವುದು ಮೂಲಗಳು ನೀಡಿರುವ ಮಾಹಿತಿ. ಚಿತ್ರತಂಡವೂ ಇದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಮೈಸೂರಿನಲ್ಲಿ ಒಂದೇ ಕಡೆ ಸಂಭ್ರಮಾಚರಣೆ ಮಾಡುವ ಬದಲು ಎಲ್ಲ ಜಿಲ್ಲೆಗಳಿಗೂ ಟೂರ್ ಹೋಗಲು ತೀರ್ಮಾನಿಸಿದೆ ಯುವರತ್ನ ಟೀಂ. ಮಾರ್ಚ್ 21ರಿಂದಲೇ ಯುವರತ್ನ ಟೂರ್ ಶುರುವಾಗಲಿದೆ. ಯಾವ ಯಾವ ದಿನ.. ಎಲ್ಲೆಲ್ಲಿ ಯುವ ಸಂಭ್ರಮ ಅನ್ನೋದು ಶೀಘ್ರದಲ್ಲೇ ಅನೌನ್ಸ್ ಆಗಲಿದೆ.
ಇನ್ನು ಮಾರ್ಚ್ 17ನೇ ತಾರೀಕು ಪುನೀತ್ ಮನೆ ಬಳಿ ಹೋಗಲೇಬೇಡಿ. ಆ ದಿನ ಪುನೀತ್ ಮನೆಯಲ್ಲಿ ಇರಲ್ಲ, ದೇವಸ್ಥಾನಗಳಿಗೆ ಕುಟುಂಬ ಸಮೇತ ಹೋಗಿರುತ್ತಾರೆ. ದಯವಿಟ್ಟು ಯಾರೂ ಮನೆಯ ಬಳಿ ಬರಬೇಡಿ ಎಂದು ಪ್ರಾರ್ಥಿಸಿದ್ದಾರೆ ಪುನೀತ್.