ಸಾರಥಿ, ನವಗ್ರಹ, ಲೈಫ್ ಜೊತೆ ಒಂದು ಸೆಲ್ಫಿ ನಂತರ ದಿನಕರ್ ತೂಗುದೀಪ್, ಪುನೀತ್ ಅವರಿಗೆ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ತೇಲಿಬಂದಿತ್ತು. ರಾಬರ್ಟ್ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಹೌದು ಎಂದು ಉತ್ತರ ನೀಡಿದ್ದರು ದರ್ಶನ್. ನನ್ನ ತಮ್ಮ ನನ್ನ ಹೊರಗೂ ಬೆಳೆಯಬೇಕು ಎಂದು ನನ್ನ ಬಯಕೆ, ಈಗ ಪುನೀತ್ ಜೊತೆ ಸಿನಿಮಾ ಮಾಡುತ್ತಿದ್ದಾನೆ ಎಂದಿದ್ದರು. ಅತ್ತ ಪುನೀತ್ ಕೂಡಾ ಸಿನಿಮಾ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದರು. ಈಗ ಆ ಸುದ್ದಿಗೆ ಇನ್ನೊಂದು ರೂಪ ಸಿಕ್ಕಿದೆ.
ದಿನಕರ್ ತೂಗುದೀಪ್ ಡೈರೆಕ್ಷನ್ ಮಾಡುತ್ತಿರೋದು ಪಕ್ಕಾ ಆಗಿದೆ. ನಿರ್ಮಾಪಕರಾಗಿರುವುದು ಜಯಣ್ಣ ಮತ್ತು ಭೋಗೇಂದ್ರ. ಜಯಣ್ಣ ಕಂಬೈನ್ಸ್ನಲ್ಲಿಯೇ ಪುನೀತ್ ಹೊಸ ಸಿನಿಮಾ ಸೆಟ್ಟೇರುತ್ತಿದ್ದು, ಮಾರ್ಚ್ 17ರಂದು ಸಿನಿಮಾ ಅಧಿಕೃತವಾಗಿ ಘೋಷಣೆಯಾಗಲಿದೆಯಂತೆ.