ದರ್ಶನ್ ಹುಟ್ಟುಹಬ್ಬ ಇರೋದು ಫೆಬ್ರವರಿ 16ರಂದು. ಆದರೆ ಅವರು ಹುಟ್ಟಿದ ದಿನ ಶಿವರಾತ್ರಿಯಂತೆ. 1977ನೇ ಇಸವಿಯ ಫೆಬ್ರವರಿ 16ರಂದು ಶಿವರಾತ್ರಿ ಇತ್ತು. ಆ ದಿನ ಹುಟ್ಟಿದವರಂತೆ ದರ್ಶನ್. ಈ ಸೀಕ್ರೆಟ್ನ್ನು ಬಿಚ್ಚಿಟ್ಟಿರೋದು ದರ್ಶನ್ ಅವರ ಫ್ರೆಂಡ್ ರಕ್ಷಿತಾ ಪ್ರೇಮ್.
ದರ್ಶನ್ ಮತ್ತು ರಕ್ಷಿತಾ ಸಿನಿಮಾಗೆ ಬರುವ ಮುಂಚಿನಿಂದಲೂ ಸ್ನೇಹಿತರು. ರಕ್ಷಿತಾ ಅವರ ತಂದೆ ಗೌರಿಶಂಕರ್ ಅವರನ್ನು ದರ್ಶನ್ ಗುರು ಎಂದೇ ಗೌರವಿಸುತ್ತಾರೆ. ರಕ್ಷಿತಾ ಅವರ ತಂದೆಯ ಬಳಿಯೂ ಸಹಾಯಕರಾಗಿ ಕೆಲಸ ಮಾಡಿದ್ದವರು ದರ್ಶನ್. ಆ ನಂತರ ದರ್ಶನ್ ಹೀರೋ ಆದರು. ರಕ್ಷಿತಾ ಮತ್ತು ದರ್ಶನ್ ಜೋಡಿ ಕನ್ನಡ ಚಿತ್ರರಂಗದ ಸೂಪರ್ ಜೋಡಿಗಳಲ್ಲಿ ಒಂದು. ಹೀಗಾಗಿಯೇ ದರ್ಶನ್ ಅವರ ಹುಟ್ಟುಹಬ್ಬದ ಸೀಕ್ರೆಟ್ ಈಗ ರಕ್ಷಿತಾ ಅವರಿಂದಲೇ ಬಹಿರಂಗವಾಗಿದೆ.
ಈ ಬಾರಿಯ ಶಿವರಾತ್ರಿ ದರ್ಶನ್ ಅವರಿಗೆ ಇನ್ನೂ ವಿಶೇಷವಾಗಿದೆ. ಶಿವರಾತ್ರಿ ದಿನದಂದೇ ರಿಲೀಸ್ ಆಗಿರುವ ರಾಬರ್ಟ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಉಮಾಪತಿ ನಿರ್ಮಾಣದ ರಾಬರ್ಟ್, ಈಗಾಗಲೇ ಬಾಕ್ಸಾಫೀಸ್ನಲ್ಲಿ ಸುಂಟರಗಾಳಿ ಎಬ್ಬಿಸಿದೆ.