` ಗೀತಾ ಶಿವ ರಾಜ್ ಕುಮಾರ್ ಕಾಂಗ್ರೆಸ್ ಸೇರ್ತಾರಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಗೀತಾ ಶಿವ ರಾಜ್ ಕುಮಾರ್ ಕಾಂಗ್ರೆಸ್ ಸೇರ್ತಾರಾ..?
Geetha Shivarajkumar Image

ಡಾ.ರಾಜ್ ಕುಮಾರ್ ಕುಟುಂಬದ ದೊಡ್ಡ ಸೊಸೆ ಗೀತಾ ಶಿವ ರಾಜ್ ಕುಮಾರ್ ಅವರಿಗೆ ರಾಜಕೀಯ ಹೊಸದಲ್ಲ. ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಮಗಳು. ತಮ್ಮಂದಿರಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಇಬ್ಬರೂ ರಾಜಕೀಯದಲ್ಲಿದ್ದಾರೆ. ಈ ಹಿಂದೆ ಗೀತಾ ಶಿವರಾಜ್ ಕುಮಾರ್, ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ವಿರುದ್ಧ ಜೆಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದರು. ಅದಾದ ನಂತರ ತೆರೆಮರೆಯಲ್ಲಿದ್ದ ಗೀತಾ, ಮಧು ಬಂಗಾರಪ್ಪ ಪರ ಪ್ರಚಾರವನ್ನೂ ಮಾಡಿದ್ದರು. ಈಗ ಕಾಂಗ್ರೆಸ್ಗೆ ಬರುತ್ತಾರೆ ಎಂಬ ಸುದ್ದಿಯಿದೆ.

ಜೆಡಿಎಸ್ನಲ್ಲಿದ್ದ ಮಧು ಬಂಗಾರಪ್ಪ ಈಗ ಕಾಂಗ್ರೆಸ್ ಕದ ತಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧು ಬಂಗಾರಪ್ಪ ಅವರನ್ನು ಅಪ್ಪಿಕೊಂಡಿದ್ಧಾರೆ. ಈ ವೇಳೆ ಸ್ವತಃ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಕೂಡಾ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ, ಅದಕ್ಕೆ ಇನ್ನೂ ಟೈಂ ಇದೆ ಎಂದಿದ್ದಾರೆ ಡಿಕೆ ಶಿವಕುಮಾರ್.

ಪತ್ನಿಯ ಪರ ಆಗ ಪ್ರಚಾರವನ್ನೂ ಮಾಡಿದ್ದ ಶಿವರಾಜ್ ಕುಮಾರ್, ನನಗೆ ರಾಜಕೀಯ ಅರ್ಥವಾಗಲ್ಲ. ಆದರೆ ನನ್ನ ಪತ್ನಿ ಹಾಗಲ್ಲ. ಆಕೆಗೆ ಇಷ್ಟವಿದೆ. ಆಕೆಯನ್ನು ಬೆಂಬಲಿಸುತ್ತೇನೆ ಎಂದಿದ್ದರು.

ಡಾ.ರಾಜ್ ಅವರನ್ನು ಇಂದಿರಾ ಗಾಂಧಿ ವಿರುದ್ಧ ನಿಲ್ಲಿಸಲು ನಡೆದಿದ್ದ ಯತ್ನ ಕನ್ನಡಿಗರಿಗೆ ನೆನಪಿದೆ. ಅಂದಹಾಗೆ ಎಲ್ಲರಿಗೂ ಗೊತ್ತಿರೋ ಹಾಗೆ ಡಾ.ರಾಜ್ ಸ್ವತಃ ರಾಜಕೀಯದಿಂದ ದೂರ ಹೋಗಿರಲಿಲ್ಲ. ರಾಜಕಾರಣಿಗಳು ಆಗ ರಾಜ್ ಅವರಿಗೆ ಸುಳ್ಳು ಭರವಸೆ ಕೊಟ್ಟಿದ್ದರು. ಅದನ್ನು ಮುಗ್ಧರಾಗಿ ನಂಬಿ ಬಂದಿದ್ದ ರಾಜ್ ಅವರಿಗೆ ಸತ್ಯದರ್ಶನ ಮಾಡಿಸಿದ್ದವರು ಅವರ ಗೆಳೆಯ ತಿಪಟೂರು ರಾಮಸ್ವಾಮಿ ಚಿತ್ರಲೋಕದಲ್ಲ ಸವಿವರವಾಗಿ ಹೇಳಿದ್ದಾರೆ.

ರಾಜ್ ರಾಜಕೀಯ ಪ್ರವೇಶಕ್ಕೆ ಒಪ್ಪಿಕೊಂಡಿದ್ದೇಕೆ? | ರಾಜ್ ಹಾಕಿದ ಕಂಡಿಷನ್ಸ್ ಏನು? | Tiptur Ramaswamy Ep 15. ಲಿಂಕ್ ಇಲ್ಲಿದೆ.

https://www.youtube.com/watch?v=lHvWZC3wm68

ಈಗ ಅವರ ಸೊಸೆ ರಾಜಕೀಯಕ್ಕೆ, ಅದರಲ್ಲೂ ಕಾಂಗ್ರೆಸ್ ಮೂಲಕ ಮತ್ತೆ ಬರುತ್ತಿದ್ದಾರೆ.