ಮಾಸ್ಟರ್ ಕಿಶನ್. ದರ್ಶನ್ ಕಣ್ಣ ಮುಂದೆ ಆಡಿ ಬೆಳೆದ ಹುಡುಗ. ಈಗ ರಾಬರ್ಟ್ ಚಿತ್ರದಲ್ಲಿ ಅವರಿಗೇ ಟೀಚರ್ ಆಗಿಬಿಟ್ಟಿದ್ದಾರೆ.
ರಾಬರ್ಟ್ ಚಿತ್ರದಲ್ಲಿ ಅಂಡರ್ ವಾಟರ್ ಸೀನ್ ಇದೆ. ಅಂಡರ್ ವಾಟರ್ ಸೀನ್‍ನಲ್ಲಿ ಸ್ವತಃ ದರ್ಶನ್ ನಟಿಸಿದ್ದಾರೆ. ವಿಶೇಷ ಅಂದ್ರೆ ದರ್ಶನ್ ಅವರಿಗೆ ಈಜು ಬರಲ್ಲ. ಹೌದು, ಖಂಡಿತಾ ಈಜು ಬರೋದಿಲ್ಲ. ಅದನ್ನು ಅವರೇ ಹೇಳಿಕೊಂಡಿದ್ದಾರೆ.
`ಆ ಸೀನ್ ಶೂಟಿಂಗ್‍ಗೆ ಹೋಗುವಾಗ ಬೇಡಬೇಡವೆಂದರೂ ನೆನಪಾಗಿದ್ದು ಮಾಸ್ತಿಗುಡಿ ದುರಂತ. ಹೀಗಾಗಿ ನನಗೆ ಈಜು ಬರಲ್ಲ ಎನ್ನೋದನ್ನೂ ಉಮಾಪತಿ ಮತ್ತು ತರುಣ್ ಇಬ್ಬರಿಗೂ ಹೇಳಿದೆ. ಅವರು ಅದಕ್ಕೆ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡರು. ನನಗೆ ಅಚ್ಚರಿಯಾಗಿದ್ದು ಮಾಸ್ಟರ್ ಕಿಶನ್. ನನ್ನ ಕಣ್ಣ ಮುಂದೆ ಆಡಿ ಬೆಳೆದ ಹುಡುಗ. ಆದರೆ, ಸ್ಕೂಬಾ ಡೈವಿಂಗ್ ವಿಷಯದಲ್ಲಿ ಅದೆಷ್ಟು ಮಾಹಿತಿ ತಿಳಿದುಕೊಂಡಿದ್ದಾನೆ ಅಂದ್ರೆ, ವ್ಹಾವ್ ಎನಿಸುತ್ತೆ. ಆತ ನನಗೆ ಸಾಕಷ್ಟು ಗೈಡ್ ಮಾಡಿದ' ಎಂದಿದ್ದಾರೆ ದರ್ಶನ್.