` ರಿಲೀಸ್ ಆಗುತ್ತಿದೆ ಚಿರು ಸರ್ಜಾರ ರಣಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಿಲೀಸ್ ಆಗುತ್ತಿದೆ ಚಿರು ಸರ್ಜಾರ ರಣಂ
Ranam Movie Image

ಚಿರಂಜೀವಿ ಸರ್ಜಾ ನಟಿಸಿರುವ ರಣಂ, ಲಾಕ್ ಡೌನ್ ಇಲ್ಲದೇ ಹೋಗಿದ್ದರೆ 2020ರಲ್ಲೇ ರಿಲೀಸ್ ಆಗಬೇಕಿತ್ತು. ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೂಡಾ ಮುಗಿಸಿ ರಿಲೀಸ್ ಆಗೋಕೆ ರೆಡಿಯಾಗಿತ್ತು. ಈಗ ಚಿರಂಜೀವಿ ಸರ್ಜಾ ಅಭಿನಯದ ರಣಂ ಮಾರ್ಚ್ 26ಕ್ಕೆ ರಿಲೀಸ್ ಆಗುತ್ತಿದೆ. ಚಿರು ನಿಧನದ ನಂತರ ರಿಲೀಸ್ ಆಗುತ್ತಿರುವ ಚಿರು ಅಭಿನಯದ ಮೊದಲ ಸಿನಿಮಾ ರಣಂ.

ಕನಕಪುರ ಶ್ರೀನಿವಾಸ್ ನಿರ್ಮಾಣದ ಚಿತ್ರದಲ್ಲಿ ಚಿರು ಜೊತೆ ಆ ದಿನಗಳು ಖ್ಯಾತಿಯ ಚೇತನ್ ಕೂಡಾ ನಟಿಸಿದ್ದಾರೆ. ಚಿತ್ರಕ್ಕೆ ವಿ. ಸಮುದ್ರ ನಿರ್ದೇಶನವಿದೆ. ವರಲಕ್ಷ್ಮಿ ಶರತ್ ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್ ಕೂಡಾ ತಾರಾಗಣದಲ್ಲಿದ್ದಾರೆ. ಚಿರು ಮತ್ತು ಬುಲೆಟ್ ಪ್ರಕಾಶ್ ಇಬ್ಬರೂ ಈಗ ಬದುಕಿಲ್ಲ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery