ಯುವರತ್ನ ಚಿತ್ರದ ಬಿಡುಗಡೆ ಪ್ಲಾನ್ ಜೋರಾಗಿದೆ. ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಪ್ರಿ-ಇವೆಂಟ್ ಶೋವನ್ನು ಮೈಸೂರಿನಲ್ಲಿ ಮಾರ್ಚ್ 20ಕ್ಕೆ ಫಿಕ್ಸ್ ಮಾಡಿದೆ ಯುವರತ್ನ ತಂಡ.
ಯುವರತ್ನ ಚಿತ್ರದ ಸುದ್ದಿಗೋಷ್ಠಿ ಮಾಡಿದ ಚಿತ್ರದ ನಿರ್ದೇಶಕ ಸಂತೋಷ್ ಆನಂದ ರಾಮ್, ನಟ ಪುನೀತ್ ರಾಜ್ ಕುಮಾರ್, ಕೆಆರ್‍ಜಿ ಸ್ಟುಡಿಯೋ ಮಾಲೀಕ ಕಾರ್ತಿಕ್ ಗೌಡ, ಡಾಲಿ ಧನಂಜಯ್, ನಟಿ ಸೋನು ಗೌಡ ಚಿತ್ರದ ಪ್ರಿ-ಇವೆಂಟ್ ಶೋ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೈಸೂರು ಯುವರತ್ನ ಶೋನಲ್ಲಿ ವಿಜಯ್ ಪ್ರಕಾಶ್, ತಮನ್ ಅವರ ಟೀಂ, ಡ್ರಮ್ ಶಿವಮಣಿ ಮತ್ತು ಅರ್ಮಾನ್ ಮಲಿಕ್ ಕಾರ್ಯಕ್ರಮವೂ ಇರಲಿದೆ. ಅದೇ ದಿನ ಚಿತ್ರದ ಟ್ರೇಲರ್ ರಿಲೀಸ್ ಆಗಲಿದ್ದು, ಚಿತ್ರದಲ್ಲಿ ಒಂದೊಳ್ಳೆ ಮೆಸೇಜ್ ಇದೆ ಎಂದಿದ್ದಾರೆ ಪುನೀತ್ ರಾಜ್‍ಕುಮಾರ್.