ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ರಿಲೀಸ್ ಆಗೋಕೂ ಮೊದಲೇ ಈ ಒಂದು ಮಾತು ಹೇಳಿಬಿಟ್ಟಿದ್ದಾರೆ. ಅವರು ಈ ಮಾತು ಹೇಳೋಕೆ ಕಾರಣ ಇತ್ತೀಚಿನ ಘಟನೆ ಮತ್ತು ಅನುಭವಗಳು. ಒಬ್ಬ ಸ್ಟಾರ್ ಸಿನಿಮಾ ರಿಲೀಸ್ ಆದ್ರೆ ಸಾಕು, ಆ ಚಿತ್ರದ ಡೈಲಾಗುಗಳನ್ನು ಅವರವರ ಪರ್ಸನಲ್ ಲೈಫಿಗೆ ಕನೆಕ್ಟ್ ಮಾಡಿಕೊಂಡು ಗದ್ದಲ ಮಾಡೋವ್ರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿಯೇ ದರ್ಶನ್ ಒಂದು ಸ್ಪಷ್ಟನೆ ಕೊಟ್ಟುಬಿಟ್ಟಿದ್ದಾರೆ.
ನಾನು ಈ ಚಿತ್ರದ ಪ್ರತಿ ಡೈಲಾಗ್ನ್ನು ಮುತುವರ್ಜಿ ವಹಿಸಿಯೇ ಮಾಡಿದ್ಧೇನೆ. ಸಂಭಾಷಣೆ ಬರೆದಿರುವ ಕೆ.ಎಲ್.ರಾಜಶೇಖರ್ ಜೊತೆ ಕುಳಿತಿದ್ದೇನೆ. ಚಿತ್ರದಲ್ಲಿರೋ ಯಾವುದೇ ಸಂಭಾಷಣೆಯನ್ನು ಇನ್ಯಾವುದೋ ಹೀರೋ ಅಥವಾ ಮತ್ತೊಬ್ಬರಿಗೆ ನೋವಾಗುವಂತೆ ಮಾಡಿಲ್ಲ. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಇರೋ ಡೈಲಾಗ್ಸ್. ಅವುಗಳನ್ನು ನಿಮಗೆ ತೋಚಿದಂತೆ ಕಲ್ಪಿಸಿಕೊಂಡು ವಿವಾದ ಮಾಡಬೇಡಿ. ನಾನು ಸಿನಿಮಾ ನೋಡುವುದು ಮತ್ತು ಬೇರೆಯವರ ಸಿನಿಮಾಗಳ ಅಪ್ಡೇಟ್ ತೆಗೆದುಕೊಳ್ಳೋದು ಕಡಿಮೆ. ಇನ್ನು ಸಂಭಾಷಣೆಯಲ್ಲಿ ಫ್ರೆಶ್ನೆಸ್ ಇರಬೇಕು ಎಂದಷ್ಟೇ ಬಯಸಿ ತಿದ್ದಿ ತೀಡಿದ್ದೇವೆ. ಅಷ್ಟೆ ಎಂದು ಕ್ಲಿಯರ್ ಆಗಿ ಹೇಳಿದ್ಧಾರೆ ದರ್ಶನ್.
ತರುಣ್ ಸುಧೀರ್ ನಿರ್ದೇಶನದ ಉಮಾಪತಿ ನಿರ್ಮಾಣದ ಸಿನಿಮಾ ರಾಬರ್ಟ್ ಇದೇ ವಾರ ರಿಲೀಸ್. ರಿಲೀಸ್ ಮಾಡುವ ಮುನ್ನವೇ ವಿವಾದ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಿದ್ಧಾರೆ ದರ್ಶನ್.