ರಾಬರ್ಟ್.. ಸೌಂಡು ಭರ್ಜರಿಯಾಗಿದೆ. ರಾಬರ್ಟ್ ಥಿಯೇಟರುಗಳಲ್ಲಿ ದರ್ಶನ್ ಅಭಿಮಾನಿಗಳ ಹಬ್ಬ ಶುರುವಾಗಿದೆ. ಮಾಸ್ ಕಾ ಬಾಪ್ ಆರ್ಭಟಕ್ಕೆ ಇನ್ನೊಂದೇ ದಿನ ಬಾಕಿ. ಚಿತ್ರಮಂದಿರಗಳು ರೆಡಿಯಾಗಿವೆ. ರಾಜ್ಯದಲ್ಲೇ ಮೊದಲ ದಿನ ರಾಜ್ಯಾದ್ಯಂತ 2576 ಶೋಗಳಲ್ಲಿ ಪ್ರದರ್ಶನ ಆಗುತ್ತಿದೆ ರಾಬರ್ಟ್.
ಕರ್ನಾಟಕದಲ್ಲಿ 670ಕ್ಕು ಹೆಚ್ಚು ಥಿಯೇಟರ್ ( 90+ ಮಲ್ಟಿಫ್ಲೆಕ್ಸ್)ಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಎಲ್ಲಾ ಚಿತ್ರಮಂದಿರಗಳಲ್ಲೂ ಫಸ್ಟ್ ಡೇ ಮಿನಿಮಮ್ 5ರಿಂದ 6 ಶೋಗಳಿವೆ. ಒಟ್ಟು 2576 ಶೋಗಳ ಪ್ರದರ್ಶನವಾಗಲಿದೆ. ಇದು ಹೊಸ ದಾಖಲೆ. ಇಷ್ಟೊಂದು ಶೋ ಕಾಣುತ್ತಿರೋ ಮೊದಲ ಸಿನಿಮಾ ರಾಬರ್ಟ್.
4 ದಿನಗಳಲ್ಲಿ ರಾಬರ್ಟ್ ಫಸ್ಟ್ ಡೇ ಟಿಕೆಟ್ ಸೋಲ್ಡ್ ಔಟ್ ಆಗಿರೋ ವರದಿ ಇದೆ. ಮೊದಲ ದಿನ ಹೌಸ್ಫುಲ್ ಬೋರ್ಡ್ ಫಿಕ್ಸ್ ಆಗಿದೆ. ಒಂದೊಂದು ಮಲ್ಟಿಫ್ಲೆಕ್ಸ್ಗಳಲ್ಲಿ 10 ಶೋಗಳಿದ್ದು, ಆಲ್ ಮೋಸ್ಟ್ ಎಲ್ಲಾ ಮಲ್ಟಿಫ್ಲೆಕ್ಸ್ ಪ್ರದರ್ಶನ ಹೌಸ್ ಫುಲ್ ಆಗುತ್ತಿದೆ.