ಸಲಗ ಚಿತ್ರತಂಡ ಸಿನಿಮಾ ರಿಲೀಸ್ ಆಗೋಕೂ ಮುನ್ನ ಕ್ರಿಕೆಟ್ ಟೂರ್ನಿ ನಡೆಸೋದಾಗಿ ಹೇಳಿತ್ತು. ಅದು ಕೋಲಾರದ ಮಾಲೂರಿನಿಂದ ಶುರುವಾಗಿಬಿಟ್ಟಿದೆ. ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರೋ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ ಈಗಾಗಲೇ ಟ್ರೇಲರ್, ಹಾಡುಗಳಿಂದ ಗಮನ ಸೆಳೆಯುತ್ತಿದೆ.
ದುನಿಯಾ ವಿಜಿ ಈ ಚಿತ್ರಕ್ಕೆ ಹೀರೋ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡಾ ಹೌದು. ಅಭಿಮಾನಿಗಳ ಜೊತೆ ಸಲಗ ಟೀಂ ಕೂಡಾ ಒಂದು ಟೀಂ ಇರುತ್ತೆ. ಅವರೆಲ್ಲರ ಜೊತೆ ಕ್ರಿಕೆಟ್ ಆಡುತ್ತೆ. ಗೆದ್ದವರಿಗೆ ಬಹುಮಾನವೂ ಇರುತ್ತೆ. ಮಾಲೂರಿನಲ್ಲಂತೂ ಅಭಿಮಾನಿಗಳು ಚಿತ್ರತಂಡವನ್ನು ಮುತ್ತಿಕೊಂಡರು. ಡಾ.ರಾಜ್, ವಿಷ್ಣು ಪ್ರತಿಮೆಗಳಿಗೆ ಹಾರ ಹಾಕಿ ಕ್ರಿಕೆಟ್ ಯಾತ್ರೆ ಶುರು ಮಾಡಿದ್ದಾರೆ ದುನಿಯಾ ವಿಜಿ ಮತ್ತು ಶ್ರೀಕಾಂತ್.
ವಿಜಿ ಜೊತೆ ಡಾಲಿ ಧನಂಜಯ್, ಸಂಜನಾ ಆನಂದ್ ಕೂಡಾ ನಟಿಸಿರುವ ಚಿತ್ರವನ್ನು ನಿರ್ಮಿಸಿರೋದು ಕೆ.ಪಿ.ಶ್ರೀಕಾಂತ್. ಗೀತಾ ಶಿವರಾಜ್ ಕುಮಾರ್ ಅವರು ಅರ್ಪಿಸಿರುವ ಚಿತ್ರವಿದು.