` ತಪ್ಪು ಮಾಡಿ ಆಮೇಲೆ ನನ್ನನ್ನು ಕೆಟ್ಟವನು ಅನ್ನಬೇಡಿ : ರಾಬರ್ಟ್ ನಿರ್ಮಾಪಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತಪ್ಪು ಮಾಡಿ ಆಮೇಲೆ ನನ್ನನ್ನು ಕೆಟ್ಟವನು ಅನ್ನಬೇಡಿ : ರಾಬರ್ಟ್ ನಿರ್ಮಾಪಕ
Umapathy S Gowda

ರಿಷಬ್ ಶೆಟ್ಟಿಯವರ ಹೀರೋ ಸಿನಿಮಾ ಥಿಯೇಟರುಗಳಲ್ಲಿ ಮೆಚ್ಚುಗೆಯ ಪ್ರದರ್ಶನ ಕಾಣ್ತಿದೆ. ಚಿತ್ರ ನೋಡಿದವರೆಲ್ಲ ಚಿತ್ರತಂಡದ ಶ್ರಮ ಮತ್ತು ಕಾನ್ಸೆಪ್ಟ್ ಎರಡನ್ನೂ ಮೆಚ್ಚಿಕೊಂಡಿದ್ದಾರೆ. ಇದರ ಜೊತೆಯಲ್ಲೇ ಆನ್ ಲೈನ್ ಪೈರಸಿ ಚಿತ್ರತಂಡವನ್ನು ಕಂಗಾಲು ಮಾಡಿದೆ. ಹೀಗಿರೋವಾಗಲೇ ಈ ವಾರ ರಿಲೀಸ್ ಆಗಲಿರೋ ರಾಬರ್ಟ್ ಚಿತ್ರವೂ ಪೈರಸಿ ಆದರೆ ಏನ್ ಕಥೆ ಅನ್ನೋ ಆತಂಕವೂ ತಲೆದೋರಿದೆ.

ಪೈರಸಿ ಮಾಡೋಕೆ ಹೋಗ್ಬೇಡಿ. ಒಂದು ವೇಳೆ ಹಾಗೇನಾದರೂ ಮಾಡಿದರೆ ಆಫ್ಟರ್ ಎಫೆಕ್ಟ್ ತುಂಬಾ ಸ್ಟ್ರಾಂಗ್ ಇರುತ್ತೆ. ನನಗೆ ನಾನು ಮತ್ತು ನನ್ನ ಹಣ ಮಾತ್ರ ಕಾಣ್ತಿರುತ್ತೆ. ಆಮೇಲೆ ನನ್ನನ್ನು ಕೆಟ್ಟವನು, ಒಳ್ಳೆಯವನು ಅನ್ನೋ ಬಿರುದು ಕೊಡಬೇಡಿ. ಯಾರಾದ್ರೂ ಪೈರಸಿ ಮಾಡಿ ಸಿಕ್ಕಿ ಹಾಕ್ಕೊಂಡ್ರೆ ಅವರ ಜೀವನ ಪೂರ್ತಿ ಮರೆಯಲಾರದ ಪಾಠ ಕಲಿಸ್ತೀವಿ ಎಂದು ವಾರ್ನಿಂಗ್ ಮಾಡಿದ್ದಾರೆ ರಾಬರ್ಟ್ ನಿರ್ಮಾಪಕ ಉಮಾಪತಿ.

ದರ್ಶನ್ ಅಭಿನಯದ ರಾಬರ್ಟ್ ಇದೇ ಶಿವರಾತ್ರಿಯಂದು ರಿಲೀಸ್ ಆಗ್ತಿದೆ. ದೊಡ್ಡ ಬಜೆಟ್ಟಿನ ಸಿನಿಮಾ. ಹೀಗಾಗಿ ಪೈರಸಿ ಕಾಟವೂ ಇರುತ್ತೆ. ಪೈರಸಿ ತಡೆಗೆ ಏನೇನೆಲ್ಲ  ಕ್ರಮ ತೆಗೆದುಕೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಂಡಿರೋ ಉಮಾಪತಿ, ಪೈರಸಿ ಮಾಡಿದವರನ್ನು ಹೆಡೆಮುರಿ ಕಟ್ಟುವ ಪ್ರತಿಜ್ಞೆಯನ್ನೂ ಮಾಡಿದ್ಧಾರೆ. ಬೇರೇನಿಲ್ಲ, ಪೈರಸಿ ಮಾಡಿ ಸಿಕ್ಕಿಕೊಂಡವರು ಅವರ ಜೀವನ ಪರ್ಯಂತ ಕೋರ್ಟು, ಕಚೇರಿ ಎಂದು ಅಲೆಯುತ್ತಲೇ ಇರಬೇಕಾಗುತ್ತೆ. ಅದಕ್ಕಿಂತ ದೊಡ್ಡ ಶಿಕ್ಷೆ ಇನ್ನೇನ್ ಕೊಡೋಕ್ ಆಗುತ್ತೆ.. ಅಲ್ವಾ..