ಡ್ರಗ್ಸ್ ಕೇಸ್ನಲ್ಲಿ ಸೆಲಬ್ರಿಟಿಗಳ ಬೆನ್ನು ಹತ್ತಿರುವ ಪೊಲೀಸರು ಈಗ ಕೆಂಪೇಗೌಡ-2 ನಿರ್ಮಾಪಕ ಶಂಕರೇಗೌಡರ ಬೆನ್ನು ಬಿದ್ದಿದ್ದಾರೆ. ಡಾಲರ್ಸ್ ಕಾಲನಿಯಲ್ಲಿರುವ ಮನೆಯ ಮೇಲೆ ಗೋವಿಂದಪುರ ಠಾಣೆ ಪೊಲೀಸರು ದಾಳಿ ಮಾಡಿದ್ದು, ಕಚೇರಿ, ಮನೆ, ಕಾರುಗಳ ಪರಿಶೀಲನೆ ಮಾಡಿದ್ದಾರೆ.
ಇತ್ತೀಚೆಗೆ ಅರೆಸ್ಟ್ ಆಗಿದ್ದ ಬಿಗ್ಬಾಸ್ ಮಸ್ತಾನ್ ಶಂಕರೇಗೌಡರ ಹೆಸರು ಹೇಳಿದ್ದಾನೆ ಎನ್ನಲಾಗಿದೆ. ಕೆಲವು ಮೊಬೈಲ್ಸ್ ಹಾರ್ಡ್ ಡಿಸ್ಕ್ ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ.