ರಾಬರ್ಟ್ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಹವಾ ಎದ್ದಿದೆ. ಇದು ಹವಾನೋ.. ಬಿರುಗಾಳಿಯೋ.. ಸುನಾಮಿನೋ.. ಹೇಳೋಕಾಗಲ್ಲ. ಏಕೆಂದರೆ ಈ ಹವಾ ಎಬ್ಬಿಸಿರೋದು ದರ್ಶನ್ ಫ್ಯಾನ್ಸ್. ಈ ಬಾರಿ ರಾಬರ್ಟ್ ಹವಾ ಶುರುವಾಗಿರೋದು ಎಂಜಿ ರಸ್ತೆಯ ಶಂಕರ್ ನಾಗ್ ಟಾಕೀಸಿನಿಂದ.
ಶಂಕರ್ ನಾಗ್ ಥಿಯೇಟರ್ ಎದುರು ರಾಬರ್ಟ್ ದರ್ಶನ್ರ ಕಟೌಟ್ ತಲೆಯೆತ್ತಿ ನಿಂತಿದೆ. ಈ ರೋಡಿನಲ್ಲಿ ಕನ್ನಡ ಚಿತ್ರರಂಗದ ಕಟೌಟ್ ಎದ್ದು ನಿಂತಿರೋದು ಇದೇ ಮೊದಲು. ಇನ್ನೊಂದು ಥಿಯೇಟರಿನಲ್ಲಿ ದರ್ಶನ್ ಅವರ 13 ಕಟೌಟ್ ನಿಲ್ಲಿಸಲಾಗುತ್ತಿದೆ. ಅತ್ತ ಹೈದರಾಬಾದ್ ಕಡೆ ಹೊರಟರೆ, ಹೈವೇಗಳಲ್ಲಿ ಹೆಜ್ಜೆ ಹೆಜ್ಜೆಗೂ ದರ್ಶನ್ ಚಿತ್ರದ ಪೋಸ್ಟರ್, ಕಟೌಟ್ಗಳು ರಾರಾಜಿಸುತ್ತಿವೆ.
ತರುಣ್ ಸುಧೀರ್ ನಿರ್ದೇಶನದ ಚಿತ್ರವಿದು. ಉಮಾಪತಿ ಬ್ಯಾನರಿನಲ್ಲಿ ಬರುತ್ತಿರೋ ದರ್ಶನ್ ಅವರ ಮೊದಲ ಸಿನಿಮಾ. ಶಿವರಾತ್ರಿಗೆ ಮೊದಲೇ ದರ್ಶನ್ ಅಭಿಮಾನಿಗಳು ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ಮಾಡುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ಉತ್ಸಾಹ ಚಿತ್ರತಂಡದವರಿಗಿಂತ ಡಬಲ್ ಇರೋದೇ ಸ್ಪೆಷಲ್.