Print 
santhosh anandram, puneeth rajkumar, yuvaratna,

User Rating: 5 / 5

Star activeStar activeStar activeStar activeStar active
 
ಯುವರತ್ನ ತೆಲುಗು ರೈಟ್ಸ್ ಯಾರಿಗೆ ಸಿಕ್ತು..? 
Yuvaratna Movie Image

ಯುವರತ್ನ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಪುನೀತ್ ರಾಜ್ಕುಮಾರ್ ತೆಲುಗು ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ, ಅಫ್ಕೋರ್ಸ್, ಪುನೀತ್ ಅವರ ಹಲವು ಚಿತ್ರಗಳು ತೆಲುಗಿಗೆ ಡಬ್ ಆಗಿವೆ. ಆದರೂ, ಥಿಯೇಟರಿಗೆ ಎಂಟ್ರಿ ಕೊಡ್ತಿರೋ ಫಸ್ಟ್ ಮೂವಿ ಯುವರತ್ನ. ಯುವರತ್ನ ಚಿತ್ರತಂಡಕ್ಕೀಗ ಗುಡ್ ನ್ಯೂಸ್ ಸಿಕ್ಕಿದೆ. ಯುವರತ್ನ ಚಿತ್ರದ ತೆಲುಗು ಡಿಸ್ಟ್ರಿಬ್ಯೂಷನ್ ಹಕ್ಕನ್ನು ವಾರಾಹಿ ಸಂಸ್ಥೆ ಖರೀದಿಸಿದೆ ಎಂಬ ಸುದ್ದಿ ಬಂದಿದೆ.

ವಾರಾಹಿ ಸಂಸ್ಥೆಗೂ, ಹೊಂಬಾಳೆ ಫಿಲಂಸ್ಗೂ ಅವಿನಾಭಾವ ಸಂಬಂಧವಿದೆ. ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ತೆಲುಗಿನಲ್ಲಿ ರಿಲೀಸ್ ಮಾಡಿದ್ದುದು ಇದೇ ಸಂಸ್ಥೆ. ಬಾಹುಬಲಿಯಂತಾ ಸಿನಿಮಾ ಮಾಡಿದ ವಾರಾಹಿ, ತೆಲುಗು ಮಾರ್ಕೆಟ್ನಲ್ಲಿ ದೊಡ್ಡ ಹೆಸರು ಹೊಂದಿದೆ.

ಯುವರತ್ನ ಚಿತ್ರದ ಪ್ರಮೋಷನ್ ಶುರುವಾಗಿದ್ದು, ವೈಜಾಗ್ನಲ್ಲಿ ವಾರಾಹಿ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ನಿಜಾಮ್‌ ಜಿಲ್ಲೆಯಲ್ಲಿ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ನೆಲ್ಲೂರು ಜೆಪಿಆರ್ ಫಿಲಂಸ್, ಗುಂಟೂರು ಧನುಶ್ರೀ ಫಿಲಂಸ್, ಕೃಷ್ಣ ಅನ್ನಪೂರ್ಣ ಸ್ಟುಡಿಯೋಸ್ ಲಿಮಿಟೆಡ್, ಪಶ್ಚಿಮ ಗೋವಾದರಿ ಇಶ್ನಾ ಎಂಟರ್‌ಪ್ರೈಸಸ್ ಹಾಗೂ ಪೂರ್ವ ಗೋವಾದರಿ ಮಹಿಕಾ ಮೂವಿಸ್ ಸಂಸ್ಥೆ ಯುವರತ್ನ ಚಿತ್ರವನ್ನು ರಿಲೀಸ್ ಮಾಡಲಿವೆ. ಯುವರತ್ನ ತೆಲುಗು ವಿತರಣೆ ಹಕ್ಕನ್ನು ತೆಲುಗಿನ ಖ್ಯಾತ ಸಂಸ್ಥೆಗಳು ಖರೀದಿಸಿವೆ.

ಕರ್ನಾಟಕದಲ್ಲಿ ಎಂದಿನಂತೆ ಕಾರ್ತಿಕ್ ಗೌಡ ಅವರ ಕೆಆರ್ಜಿ ಸ್ಟುಡಿಯೋ ಸಿನಿಮಾ ರಿಲೀಸ್ ಮಾಡುತ್ತಿದೆ.