Print 
dwarkish, rishabh shetty

User Rating: 5 / 5

Star activeStar activeStar activeStar activeStar active
 
ದ್ವಾರಕೀಶ್ ಅವರ ಆಪ್ತಮಿತ್ರ ಬಂಗಲೆ ಖರೀದಿಸಿದ ರಿಷಬ್ ಶೆಟ್ಟಿ
Dwarkish, Rishab Shetty

ಕನ್ನಡ ಚಿತ್ರರಂಗದ ಕುಳ್ಳ ದ್ವಾರಕೀಶ್ ಅವರ ಬಂಗಲೆ ಮಾರಾಟವಾಗಿದೆ. ದ್ವಾರಕೀಶ್ ಅವರು ತಾವು ದುಡಿದದ್ದೆಲ್ಲವನ್ನೂ ಕಳೆದುಕೊಳ್ಳೋದು ಹೊಸದಲ್ಲ. ಆದರೆ, ಹೆಚ್‍ಎಸ್‍ಆರ್ ಲೇಔಟ್ ಬಂಗಲೆ ಇದೆಯಲ್ಲ, ಅದು ಆಪ್ತಮಿತ್ರ ಚಿತ್ರ ಸಕ್ಸಸ್ ಆದಾಗ ಆ ಹಣದಲ್ಲಿ ಖರೀದಿಸಿದ್ದ ಬಂಗಲೆ ಅದು. ಆಪ್ತಮಿತ್ರ ಚಿತ್ರದ ಲಾಭದಲ್ಲಿ ತಮ್ಮ ಹಳೆಯ ಸಾಲಗಳನ್ನೆಲ್ಲ ತೀರಿಸಿ ಖರೀದಿಸಿದ್ದ ಮನೆ ಅದು. ಅದನ್ನೀಗ ದ್ವಾರಕೀಶ್ ಮಾರಾಟ ಮಾಡಿದ್ದಾರೆ.

ಇತ್ತೀಚೆಗೆ ದ್ವಾರಕೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಮನೆಯನ್ನು ಮಾರಿದ್ದಾರೆ. ಈ ಮನೆಯನ್ನು ಖರೀದಿಸಿರುವುದು ರಿಷಬ್ ಶೆಟ್ಟಿ. ಅಂದಹಾಗೆ ಇದು ದ್ವಾರಕೀಶ್ ಅವರ 13ನೇ ಮನೆ. ಈ ಮನೆಯನ್ನು ರಿಷಬ್ ಶೆಟ್ಟಿ ಹತ್ತೂವರೆ ಕೋಟಿಗೆ ಖರೀದಿಸಿದ್ದಾರಂತೆ.

ವ್ಯವಹಾರ ಅಂದ್ಮೇಲೆ ಲಾಭ ನಷ್ಟ ಇದ್ದಿದ್ದೇ. ಈ ಹಿಂದೆಯೂ ಮಾರಿದ್ದೆ. ಮತ್ತೆ ಖರೀದಿಸಿದ್ದೆ. ಹಣ ಇದ್ದಾಗ ಮನೆಗಳನ್ನು ಖರೀದಿಸುವುದು ಕಷ್ಟ ಬಂದಾಗ ಮಾರುವುದು ನನಗೆ ಹೊಸದೇನಲ್ಲ. ಮತ್ತೆ ಪುಟಿದೇಳುತ್ತೇನೆ ಎಂಬ ಆತ್ಮವಿಶ್ವಾಸ ದ್ವಾರಕೀಶ್ ಅವರದ್ದು.