ಕನ್ನಡ ಚಿತ್ರರಂಗದ ಕುಳ್ಳ ದ್ವಾರಕೀಶ್ ಅವರ ಬಂಗಲೆ ಮಾರಾಟವಾಗಿದೆ. ದ್ವಾರಕೀಶ್ ಅವರು ತಾವು ದುಡಿದದ್ದೆಲ್ಲವನ್ನೂ ಕಳೆದುಕೊಳ್ಳೋದು ಹೊಸದಲ್ಲ. ಆದರೆ, ಹೆಚ್‍ಎಸ್‍ಆರ್ ಲೇಔಟ್ ಬಂಗಲೆ ಇದೆಯಲ್ಲ, ಅದು ಆಪ್ತಮಿತ್ರ ಚಿತ್ರ ಸಕ್ಸಸ್ ಆದಾಗ ಆ ಹಣದಲ್ಲಿ ಖರೀದಿಸಿದ್ದ ಬಂಗಲೆ ಅದು. ಆಪ್ತಮಿತ್ರ ಚಿತ್ರದ ಲಾಭದಲ್ಲಿ ತಮ್ಮ ಹಳೆಯ ಸಾಲಗಳನ್ನೆಲ್ಲ ತೀರಿಸಿ ಖರೀದಿಸಿದ್ದ ಮನೆ ಅದು. ಅದನ್ನೀಗ ದ್ವಾರಕೀಶ್ ಮಾರಾಟ ಮಾಡಿದ್ದಾರೆ.
ಇತ್ತೀಚೆಗೆ ದ್ವಾರಕೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಮನೆಯನ್ನು ಮಾರಿದ್ದಾರೆ. ಈ ಮನೆಯನ್ನು ಖರೀದಿಸಿರುವುದು ರಿಷಬ್ ಶೆಟ್ಟಿ. ಅಂದಹಾಗೆ ಇದು ದ್ವಾರಕೀಶ್ ಅವರ 13ನೇ ಮನೆ. ಈ ಮನೆಯನ್ನು ರಿಷಬ್ ಶೆಟ್ಟಿ ಹತ್ತೂವರೆ ಕೋಟಿಗೆ ಖರೀದಿಸಿದ್ದಾರಂತೆ.
ವ್ಯವಹಾರ ಅಂದ್ಮೇಲೆ ಲಾಭ ನಷ್ಟ ಇದ್ದಿದ್ದೇ. ಈ ಹಿಂದೆಯೂ ಮಾರಿದ್ದೆ. ಮತ್ತೆ ಖರೀದಿಸಿದ್ದೆ. ಹಣ ಇದ್ದಾಗ ಮನೆಗಳನ್ನು ಖರೀದಿಸುವುದು ಕಷ್ಟ ಬಂದಾಗ ಮಾರುವುದು ನನಗೆ ಹೊಸದೇನಲ್ಲ. ಮತ್ತೆ ಪುಟಿದೇಳುತ್ತೇನೆ ಎಂಬ ಆತ್ಮವಿಶ್ವಾಸ ದ್ವಾರಕೀಶ್ ಅವರದ್ದು.