Print 
darshan,

User Rating: 0 / 5

Star inactiveStar inactiveStar inactiveStar inactiveStar inactive
 
ರೈತರು ಅನ್ನ ಕೊಟ್ಟರೆ ತಾನೆ ನಮಗೆ ರಕ್ತ : ರೈತ ರಾಯಭಾರಿ ದರ್ಶನ್
Darshan Image

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ರಾಜ್ಯ ಸರ್ಕಾರ ಕೃಷಿ ಇಲಾಖೆಯ ರಾಯಭಾರಿಯಾಗಿನ್ನಿಸಿದೆ. ಸರ್ಕಾರದ ಆದೇಶ ಅಧಿಕೃತವಾಗಿಯೇ ಹೊರಬಿದ್ದಿತ್ತು. ಈಗ ದರ್ಶನ್ ರಾಯಭಾರಿಯಾಗಿ ಅಧಿಕೃತವಾಗಿ ಹುದ್ದೆ ಸ್ವೀಕಾರ ಮಾಡಿದ್ದಾರೆ. ವಿಧಾನಸೌಧದಲ್ಲಿ. ರೈತರ ರಾಯಭಾರಿಯಾಗಲು, ಸರ್ಕಾರದ ಕೃಷಿ ಕೆಲಸಗಳನ್ನು ರೈತರಿಗೆ ತಲುಪಿಸಲು ದರ್ಶನ್ ಯಾವುದೇ ಸಂಭಾವನೆ ಸ್ವೀಕರಿಸಿಲ್ಲ.

ಕೃಷಿ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕರಿಸಿದ ವೇಳೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ದರ್ಶನ್ ಕೇವಲ ನಟನಲ್ಲ,ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತೊಡಗಿರುವ ರೈತ. ಅವರು ರೈತ ನಾಯಕ ಮುಖ್ಯಮಂತ್ರಿಯಾಗಿರುವ ಹೊತ್ತಿನಲ್ಲಿ, ಅವರ ಸಮ್ಮುಖದಲ್ಲೇ ರೈತರ ರಾಯಭಾರಿಯಾಗಿರುವುದು ನೋಡೋಕೆ ಖುಷಿಯಾಗುತ್ತಿದೆ. ಎಂದರು.

ದರ್ಶನ್ ಫಾರ್ಮ್ ಹೌಸ್ನ್ನು ಮಿನಿ ಝೂ ಎಂದು ಕರೆದ ಬಿ.ಸಿ.ಪಾಟೀಲ್, ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿ ಸುಮಾರು 150 ಜನಕ್ಕೆ ಕೆಲಸ ಕೊಟ್ಟಿರೋದನ್ನೂ ಹೇಳಿದರು. ದರ್ಶನ್ ಉಚಿತವಾಗಿ ರಾಯಭಾರಿಯಾಗುತ್ತಿರುವುದನ್ನು ಹೇಳಿದ ಪಾಟೀಲ್, ದರ್ಶನ್ ಅವರನ್ನು ಅಭಿನಂದಿಸಿದ್ರು.

ಇದೇ ವೇಳೆ ಮಾತನಾಡಿದ ರೈತ ರಾಯಭಾರಿ ದರ್ಶನ್ ಬಿಸಿ ಪಾಟೀಲ್ ಮೊದಲು ಪೋಲಿಸ್ ಆಗಿದ್ದವರು, ಆಮೇಲೆ ಸಿನಿಮಾ‌ ಮಾಡಿ.. ಈಗ ರಾಜಕಾರಣದಲ್ಲಿದ್ದಾರೆ. ಅವರು ಇದನ್ನೆಲ್ಲ ಜನರಿಗಾಗಿ ಮಾಡ್ತಿದ್ದಾರೆ. ನಾನು ಹೆಚ್ಚು ಏನು ಮಾಡ್ತಾ ಇಲ್ಲ. ರೈತರ ಸವಲತ್ತುಗಳನ್ನು ಜನರಿಗೆ ಜಾಹೀರಾತುಗಳ ಮೂಲಕ ತಿಳಿಸುತ್ತಾ ಇದ್ದೇನೆ ಅಷ್ಟೇ ನಮ್ಮದು ಮತ್ತು ರೈತರದ್ದು ಬ್ಲಡ್ ರಿಲೇಷನ್ ಶಿಪ್ ಇದೆ. ರೈತರು ಅನ್ನ ಕೊಟ್ಟರೆ ತಾನೆ ನಮಗೆ ರಕ್ತ ಬರೋದು, ಶಕ್ತಿ ಬರೋದು ಎಂದು ಭಾವುಕರಾಗಿಯೇ ಮಾತನಾಡಿದ್ರು.