Print 
darshan, rockline venkaetsh, gold ring,

User Rating: 5 / 5

Star activeStar activeStar activeStar activeStar active
 
ದರ್ಶನ್`ಗೆ ರಾಕ್`ಲೈನ್ ಗೋಲ್ಡ್ ರಿಂಗ್
Rockline Venkatesh, Darshan

ಈ ವರ್ಷವೇ ಇನ್ನೊಂದು ಸಿನಿಮಾ ಮಾಡ್ತೇನೆ. ಇದೇ ವರ್ಷ ಮತ್ತೆ ಬರುತ್ತೇನೆ. ಹೀಗೆ ಹೇಳಿದ್ದವರು ದರ್ಶನ್. ರಾಬರ್ಟ್ ಚಿತ್ರದ ಪ್ರಚಾರದ ವೇಳೆ ದರ್ಶನ್ ಇದೇ ವರ್ಷ ಮತ್ತೊಂದು ಸಿನಿಮಾ ಮಾಡುವ ಭರವಸೆ ಕೊಟ್ಟಿದ್ದರು. ರಾಜವೀರ ಮದಕರಿ ನಾಯಕ ಚಿತ್ರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದನ್ನು ಹೇಳಿದ್ದರು. ಈಗ ಅವರ ಮುಂದಿನ ಚಿತ್ರ ಯಾವುದು ಅನ್ನೋದು ಕನ್‍ಫರ್ಮ್ ಆಗಿದೆ.

ರಾಕ್`ಲೈನ್ ಬ್ಯಾನರಿನಲ್ಲೇ ದರ್ಶನ್ ಹೊಸ ಚಿತ್ರ ಒಪ್ಪಿಕೊಂಡಿದ್ದು, ಚಿತ್ರದ ಹೆಸರು ಗೋಲ್ಡ್ ರಿಂಗ್. ಈ ಬಾರಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವುದು ರಾಕ್‍ಲೈನ್ ವೆಂಕಟೇಶ್ ಪುತ್ರ ಯತೀಶ್.

ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‍ಟೇನರ್. ಶೀಘ್ರದಲ್ಲೇ ಸೆಟ್ಟೇರಲಿದೆ. ಚಿತ್ರದ ಕಥೆಗೆ ಗೋಲ್ಡ್ ರಿಂಗ್ ಅನ್ನೋ ಟೈಟಲ್ ಚೆನ್ನಾಗಿ ಒಪ್ಪುತ್ತೆ. ಕಥೆ ಮತ್ತು ಟೈಟಲ್ ಫೈನಲ್ ಆಗಿದೆ. ಶೀಘ್ರದಲ್ಲೇ ನಿರ್ದೇಶಕರು ಮತ್ತು ತಾರಾಗಣದ ಮಾಹಿತಿ ನೀಡುತ್ತೇನೆ ಎಂದಿದ್ದಾರೆ ರಾಕ್`ಲೈನ್ ಯತೀಶ್.