ವಿಧಾನಸೌಧದಲ್ಲಿ ದರ್ಶನ್ ರೈತ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದಾಗ ಅವರ ಎದುರು ಇದ್ದದ್ದು ರೈತ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಯಾವುದೇ ಸಂಭಾವನೆಯಿಲ್ಲದೆ ಕೃಷಿ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಅವರನ್ನು ಹೊಗಳಿದ ಯಡಿಯೂರಪ್ಪ ದರ್ಶನ್ ಅವರ ರಾಬರ್ಟ್ ಚಿತ್ರದ ಬಗ್ಗೆ ಹಲವರು ಹೇಳುತ್ತಿದ್ದಾರೆ. ನಾನೂ ಕೂಡಾ ತಪ್ಪದೇ ಆ ಸಿನಿಮಾ ನೋಡುತ್ತೇನೆ ಎಂದು ಹೇಳಿದರು.
ಇದೊಂದು ವಿಶೇಷ ಕಾರ್ಯಕ್ರಮ. ದರ್ಶನ್ ಬಗ್ಗೆ ಬಿಸಿ ಪಾಟೀಲ್ ಸಾಕಷ್ಟು ಮಾತನಾಡಿದ್ದಾರೆ. ಅವರು ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಅವರ ತೋಟದಲ್ಲಿ ಕೃಷಿ ಕೆಲಸ ಮಾಡ್ತಿದ್ದಾರೆ. ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿದ್ದೇ ಸಂತಸ ಎಂದು ಹೇಳಿ ರಾಬರ್ಟ್ ಚಿತ್ರಕ್ಕೆ ಶುಭ ಹಾರೈಸಿದ್ರು.
ದರ್ಶನ್ ಅಭಿನಯದ 53ನೇ ಸಿನಿಮಾ ರಾಬರ್ಟ್ ಇದೇ ಮಾರ್ಚ್ 11ರಂದು ಶಿವರಾತ್ರಿ ಹಬ್ಬದ ಸ್ಪೆಷಲ್ ಆಗಿ ರಿಲೀಸ್ ಆಗುತ್ತಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರಕ್ಕೆ ಉಮಾಪತಿ ನಿರ್ಮಾಪಕ. ದರ್ಶನ್ ಎದುರು ನಾಯಕಿಯಾಗಿ ಆಶಾ ಭಟ್, ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ, ದೇವರಾಜ್, ರವಿಶಂಕರ್, ಚಿಕ್ಕಣ್ಣ,ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ.