Print 
sai prakash,

User Rating: 0 / 5

Star inactiveStar inactiveStar inactiveStar inactiveStar inactive
 
ಆತ್ಮಹತ್ಯೆ ಸುತ್ತ ಸಾಯಿಪ್ರಕಾಶ್ ಚಿತ್ರ
Senior Director Sai Prakash

ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಚಿತ್ರದ ಹೆಸರು ಸೆಪ್ಟೆಂಬರ್ 10. ಒಂದು ದಿನಾಂಕವನ್ನು ಟೈಟಲ್ ಮಾಡಿದ್ದೇಕೆ ಎಂದರೆ ಸಾಯಿ ಪ್ರಕಾಶ್ ಉತ್ತರ ಇದು.

``ಈ ಚಿತ್ರ ಆತ್ಮಹತ್ಯೆಗೆ ಯತ್ನಿಸುವವರ ಮನಸ್ಥಿತಿ, ತೊಳಲಾಟಗಳ ಕಥೆ ಇರುವ ಸಿನಿಮಾ. ಸೆಪ್ಟೆಂಬರ್ 10 ವಿಶ್ವ ಆತ್ಮಹತ್ಯಾ ನಿವಾರಣಾ ದಿನ. ಹೀಗಾಗಿ ಚಿತ್ರಕ್ಕೆ ಸೆಪ್ಟೆಂಬರ್ 10'' ಅನ್ನೋ ಟೈಟಲ್ ಕೊಟ್ಟಿದ್ದೇವೆ ಎನ್ನುತ್ತಾರೆ ಸಾಯಿಪ್ರಕಾಶ್.

ತೆಲಂಗಾಣದ ಕ್ಯಾಪ್ಟನ್ ಜಿ.ಜಿ.ರಾವ್ ಎಂಬುವವರು ಬರೆದಿರುವ ನೈಜ ಸಂಗತಿಗಳನ್ನಿಟ್ಟುಕೊಂಡು ರೂಪಿಸಿರುವ ಕಥೆ ಇದು. ಹಿರಿಯನಟ ಶಶಿಕುಮಾರ್ ಚಿತ್ರದಲ್ಲಿ ಸೈಕಲಾಜಿಸ್ಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವಕುಮಾರ್, ಶ್ರೀರಕ್ಷಾ, ರಶಿತಾ ಮಲ್ನಾಡ್, ಸಿಹಿಕಹಿ ಚಂದ್ರು, ರಮೇಶ್ ಭಟ್.. ಹೀಗೆ ಸೀನಿಯರ್ ಕಲಾವಿದರ ತಂಡವೇ ಚಿತ್ರದಲ್ಲಿದೆ.