ಸದ್ಯಕ್ಕೆ ಪುನೀತ್ ಭರ್ಜರಿ ಚೇತನ್ ಅವರ ಜೇಮ್ಸ್ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೇನು ಕೆಲವೇ ದಿನ, ಯುವರತ್ನ ಪ್ರಮೋಷನ್ನಿನಲ್ಲಿ ಬ್ಯುಸಿಯಾಗ್ತಾರೆ. ಅದು ಮುಗಿಯುತ್ತಿದ್ದಂತೆ ಮುಂದಿನ ಸಿನಿಮಾ ಯಾವುದು..? ಯಾರದು..? ಡೈರೆಕ್ಟರ್ ಯಾರು..? ಈ ಪ್ರಶ್ನೆಗಳಿಗೆ ಇತ್ತೀಚೆಗೆ ಇಬ್ಬರ ಹೆಸರು ಕೇಳಿ ಬಂದಿತ್ತು.
ಸಂತೋಷ್ ಆನಂದ್ ರಾಮ್ ಅವರೇ ಇನ್ನೊಂದು ಸಿನಿಮಾ ಮಾಡ್ತಾರೆ ಅನ್ನೋದು ಒಂದು ಮಾತಾದ್ರೆ, ದಿನಕರ್ ತೂಗುದೀಪ ಡೈರೆಕ್ಷನ್ ಮಾಡ್ತಾರಂತೆ ಅನ್ನೋದು ಇನ್ನೊಂದು ಸುದ್ದಿ. ಈಗ ಇದ್ದಕ್ಕಿದ್ದಂತೆ ಅಲ್ಲಿ ಪೈಲ್ವಾನ್ ಕೃಷ್ಣ ಹೆಸರು ಕೇಳಿ ಬರ್ತಿದೆ.
ಗಜಕೇಸರಿ ಮೂಲಕ ಡೈರೆಕ್ಟರ್ ಆದ ಕೃಷ್ಣ, ಹೆಬ್ಬುಲಿ, ಪೈಲ್ವಾನ್ ನಂತರ ಈಗ ಪ್ರೊಡ್ಯೂಸರ್ ಆಗಿಯೂ ಕ್ಲಿಕ್ ಆಗಿದ್ದಾರೆ. ಪುನೀತ್ ಅವರ ಹಲವು ಚಿತ್ರಗಳಿಗೆ ಕ್ಯಾಮೆರಾಮನ್ ಆಗಿ ಅನುಭವ ಮತ್ತು ಆತ್ಮೀಯತೆ ಇರುವ ಕೃಷ್ಣ, ಪುನೀತ್ ಸಿನಿಮಾಗೆ ರೆಡಿಯಾಗಿದ್ದರೆ ಆಶ್ಚರ್ಯವೇನಿಲ್ಲ. ಏನೇ ಅಂದ್ರೂ ಕೆಲವೇ ದಿನಗಳಲ್ಲಿ ಪುನೀತ್ ಹುಟ್ಟುಹಬ್ಬವಿದೆ. ಆ ದಿನ ಎಲ್ಲವೂ ಗೊತ್ತಾಗಲಿದೆ.