` ಹೀರೋ ಕಥೆ ಇದೇ.. ಇಷ್ಟೆ.. : ಹೀರೋ ಟೀಂ ನೋಡ್ಲೇಬೇಕಾದ ಸ್ಟೋರಿ ಇದು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
 ಹೀರೋ ಕಥೆ ಇದೇ.. ಇಷ್ಟೆ.. : ಹೀರೋ ಟೀಂ ನೋಡ್ಲೇಬೇಕಾದ ಸ್ಟೋರಿ ಇದು
Hero Movie Image

ಹೀರೋ ಕಥೆ ನಂ. 1

ಏನಿಲ್ಲ ಗುರೂ.. ಹೀರೋಯಿನ್‍ಗೆ ಹೀರೋ ಜೊತೆ ಮೊದಲೇ ಲವ್ವಾಗಿರುತ್ತೆ. ಆದರೆ ಶ್ರೀಮಂತನ ಜೊತೆಯಲ್ಲಿ ಮದುವೆ ಆಗೋಗಿರುತ್ತೆ. ಅವಳನ್ನ ಎತ್ತಾಕ್ಕೊಂಡ್ ಹೋಗೋಕೆ ಹೀರೋ ಬರ್ತಾನೆ. ಹೊತ್ಕೊಂಡ್ ಹೋಗ್ತಾನೆ.

ಹೀರೋ ಕಥೆ ನಂ. 2

ಹೀರೋಯಿನ್ ಶ್ರೀಮಂತನ ಹೆಂಡತಿ. ಆಕೆಗೂ ಈ ರಿಷಬ್ ಶೆಟ್ಟಿಗಗೂ ಅಫೇರ್ ಇರುತ್ತೆ. ಅದು ಗೊತ್ತಾಗಿ ಪ್ರಮೋದ್ ಶೆಟ್ಟಿ ಅವಳನ್ನು ಕೊಲ್ಲೋಕೆ, ಹಿಂಸೆ ಕೊಡೋಕೆ ಶುರು ಮಾಡ್ತಾನೆ. ಆಮೇಲೆ ರಿಷಬ್  ಶೆಟ್ಟಿ ಬಂದು ಕಾಪಾಡ್ತಾನೆ.

ಹೀರೋ ಕಥೆ ನಂ. 3

ಹೀರೋ ಕಟಿಂಗ್ ಶಾಪ್‍ನಲ್ಲಿ ಕೆಲಸ ಮಾಡೋವ್ನು. ಅವನಿಗೆ ಶ್ರೀಮಂತನ ಆಸ್ತಿ ಮತ್ತು ಹೆಂಡ್ತಿ ಮೇಲೆ ಕಣ್ಣು. ಅದಕ್ಕಾಗಿ ಬಂಗಲೆಗೆ ಬಂದಾಗ ಅವಳನ್ನೂ ಪಟಾಯಿಸಿಕೊಂಡು, ಚಿನ್ನ, ಒಡವೆ ಹೊಡ್ಕೊಂಡು ಹೋಗಿ ಹೀರೋ ಆಗ್ತಾನೆ.

ಹೀರೋ ಕಥೆ ನಂ. 4

ಹೀರೋಯಿನ್‍ಗೇ ಶ್ರೀಮಂತ ಗಂಡನ ಮೇಲೆ ಕೋಪ ಇರುತ್ತೆ. ಹೀಗಾಗಿ ಅವಳು ತನ್ನ ಹಳೆಯ ಲವರ್ (ರಿಷಬ್)ನ್ನ ಕರೆಸಿಕೊಂಡು ಗೇಮ್ ಆಡ್ತಾಳೆ. ಆಟವನ್ನೆಲ್ಲ ಆಡಿಸೋದು ಹೀರೋಯಿನ್. ಹೀರೋಗೆ ತನ್ನ ಮೇಲಿರೋ ಪ್ರೀತಿಯನ್ನ ಅವಳು ಯೂಸ್ ಮಾಡ್ಕೋತಾಳೆ.

ಹೀರೋ ಕಥೆ ನಂ. 5

ಹೀರೋಯಿನ್, ಬಂಗಲೆಯಲ್ಲಿ ಕೆಲಸ ಮಾಡುವವಳು. ಹೀರೋಗೂ ಅವಳಿಗೂ ಲವ್ವು. ಹೀರೋನ ಪ್ರೇಯಸಿ ಮನೆಗೆಲಸದವಳ ಮೇಲೆ ಶ್ರೀಮಂತ ಕಣ್ಣು ಹಾಕ್ತಾನೆ. ಮುಂದಿನದ್ದೆಲ್ಲ ಟ್ರೇಲರಲ್ಲೇ ಇದೆ.. ಅಷ್ಟೆ ಬಾಸು..

ಹಲೋ.. ಹಲೋ.. ರಿಷಬ್ ಶೆಟ್ಟಿಯವರೇ.. ಭರತ್ ರಾಜ್ ಅವರೇ.. ಕಥೆ ಗೊತ್ತಾಯ್ತಾ..? ಹೀರೋ ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆ ಇದು ಹೀರೋ ಬಗ್ಗೆ ಕುತೂಹಲ ಇರೋ ಒಂದಷ್ಟು ಜನ ಫ್ಯಾನ್ಸ್ ಕಟ್ಟಿರುವ ಅಥವಾ ಊಹಿಸಿರುವ ಕಥೆ.

ಹೌದಾ ಅಂದ್ರೆ ಹೀರೋ ಚಿತ್ರತಂಡ ಹೇಳೋದೇ ಬೇರೆ. ಇದು ರಿಷಬ್ ಟೀಂನ ಸಿನಿಮಾ. ಅಭಿಮಾನಿಗಳು ಊಹಿಸಿದ್ದಕ್ಕಿಂತ ಭಿನ್ನವಾಗಿರುತ್ತೆ ಮತ್ತು ಥ್ರಿಲ್ ಕೊಡುತ್ತೆ. ಸ್ವಲ್ಪ ವೇಯ್ಟ್ ಮಾಡಿ ಅಂತಿದೆ. ಮಾರ್ಚ್ 5ನೇ ತಾರೀಕಿನವರೆಗೆ ವೇಯ್ಟ್ ಮಾಡಿ