ಹೀರೋ ಚಿತ್ರದ ಹಾಡೊಂದು ರಿಲೀಸ್ ಆಗಿದೆ. ಅದರಲ್ಲೂ ನೆನಪಿನ ಹುಡುಗಿಯೇ.. ಹಾಡು ಗುನುಗುವ ಗುಣವಿರೋ ಹಾಡು. ಒನ್ಸ್ ಎಗೇಯ್ನ್ ಅಜನೀಶ್ ಲೋಕನಾಥ್ ಮೆಲೋಡಿ ಸ್ಕೋರ್ ಮಾಡಿದ್ದಾರೆ. ಆದರೆ ಈ ಚಿತ್ರದ ಮ್ಯೂಸಿಕ್ ಮತ್ತು ಅದರ ಚಾಲೆಂಜ್ ಕಥೆ ಬೇರೆಯೇ ಇದೆ.
ಎಲ್ಲ ಚಿತ್ರಗಳಿಗೂ ಮ್ಯೂಸಿಕ್ ಮಾಡೋ ಸ್ಟೈಲೇ ಬೇರೆ. ಆದರೆ ಹೀರೋಗೆ ಮ್ಯೂಸಿಕ್ ಮಾಡಿದ ಅನುಭವವೇ ಬೇರೆ. ಸಾಮಾನ್ಯವಾಗಿ ಚಿತ್ರದ ಬಗ್ಗೆ ಡಿಸ್ಕಷನ್ ನಡೆಯುವಾಗಲೇ ಹಾಡು, ಮ್ಯೂಸಿಕ್‍ಗಳ ಒಂದು ರಫ್ ವರ್ಕ್ ಆದರೂ ಆಗಿರುತ್ತೆ. ಆದರೆ ಹೀರೋ ಚಿತ್ರದಲ್ಲಿ ಹಾಗಾಗಲಿಲ್ಲ. ಹೀರೋ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದ ಮೇಲೆ ರಿಷಬ್ ಶೆಟ್ಟಿ ಮ್ಯೂಸಿಕ್ ಮಾಡೋಕೆ ಹೇಳಿದರು ಎನ್ನುತ್ತಾರೆ ಅಜನೀಶ್.
ಅದು ನನಗೆ ಚಾಲೆಂಜಿಂಗ್ ಆಗಿತ್ತು. ನಮ್ಮ ಕಂಪೋಸಿಂಗ್ ಮೇಲೆ ಎಲ್ಲರೂ ಸೀನ್ ಶೂಟ್ ಮಾಡಿದ್ರೆ, ಇಲ್ಲಿ ಸೀನ್‍ಗಳಿಗೆ ತಕ್ಕಂತೆ ಮ್ಯೂಸಿಕ್ ಕಂಪೋಸ್ ಮಾಡೋ ಸವಾಲು. ರಿಷಬ್ ಅವರಂತೂ ನನಗೆ 3 ಹಾಡು ಬೇಕು. ಎಲ್ಲಿ, ಯಾವ ಪಾರ್ಟ್‍ನಲ್ಲಿದ್ದರೆ ಓಕೆ ಅನ್ನೋದನ್ನು ನೋಡಿ ಕಂಪೋಸ್ ಮಾಡಿಕೊಡು ಎಂದರು. ಮೊದ ಮೊದಲು ತಲೆ ಕೆಟ್ಟಿದ್ದು ಹೌದಾದರೂ, ಆಮೇಲೆ ಅದು ಕೊಟ್ಟ ಥ್ರಿಲ್ಲೇ ಬೇರೆ ಎಂದಿದ್ದಾರೆ ಅಜನೀಶ್.
ಅಜನೀಶ್ ಲೋಕನಾಥ್ ಮತ್ತು ರಿಷಬ್ ಶೆಟ್ಟಿ ಅವರ ಸಂಬಂಧ ಬೇರೆಯದೇ ರೀತಿಯದ್ದು. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಬೆಲ್ ಬಾಟಂ..ಹೀಗೆ ರಿಷಬ್ ಶೆಟ್ಟಿ ಜರ್ನಿಯಲ್ಲಿ ಅಜನೀಶ್ ಕೂಡಾ ಜೊತೆ ಜೊತೆಯಲಿ ಹೆಜ್ಜೆ ಹಾಕಿದ್ದಾರೆ. ಹೀರೋ ಚಾಲೆಂಜ್‍ನ್ನೂ ಸೊಗಸಾಗಿ ಗೆದ್ದಿದ್ದಾರೆ. ಮುಂದಿನದ್ದು ಪ್ರೇಕ್ಷಕರ ಚಾಲೆಂಜ್.