ಆಶಾ ಭಟ್, ಮಿಸ್ ಸುಪ್ರಾ ಇಂಟರ್‍ನ್ಯಾಷನಲ್ ಅವಾರ್ಡ್ ವಿಜೇತೆ. ಅಪ್ಪಟ ಕನ್ನಡತಿಯೇ ಆದರೂ ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿದ ಮೇಲೆ ಮುಂಬೈನಲ್ಲೇ ಸೆಟಲ್ ಆಗಿದ್ದವರು. ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದ ಆಶಾ ಭಟ್ ತರುಣ್ ಸುಧೀರ್ ಕಣ್ಣಿಗೆ ಬಿದ್ದಿದ್ದು ಹೇಗೆ..?
ನಾನು ಮುಂಬೈನಲ್ಲೇ ಇದ್ದೆ. ಮಾಡೆಲಿಂಗ್ ಮಾಡುತ್ತಿದ್ದ ಕಾರಣ, ಬಾಲಿವುಡ್ ಆಫರ್‍ಗಳು ಬರೋಕೆ ಶುರುವಾಯ್ತು. ಆಗ ಸಿಕ್ಕ ಆಫರ್ ಹಿಂದಿಯ ಜಂಗ್ಲಿ ಸಿನಿಮಾ. ವಿದ್ಯುತ್ ಜಮ್ವಾಲ್ ಎದುರು ನಟಿಸಿದ್ದೆ. ಅದನ್ನು ನೋಡಿ ತರುಣ್ ಸುಧೀರ್ ನನ್ನನ್ನು ಕಾಂಟ್ಯಾಕ್ಟ್ ಮಾಡಿದರು. ನನಗೂ ಕ್ಯಾರೆಕ್ಟರ್, ಕಥೆ ಮತ್ತು ಟೀಂ ಇಷ್ಟವಾಯ್ತು. ಒಪ್ಪಿಕೊಂಡೆ ಎಂದಿದ್ದಾರೆ ಆಶಾ ಭಟ್.
ಆಶಾ ಭಟ್, ಅವರ ಆಕ್ಟಿಂಗ್ ಸ್ಕಿಲ್ ಮತ್ತು ಕಾನ್ಫಿಡೆನ್ಸ್ ರಾಬರ್ಟ್ ಚಿತ್ರಕ್ಕೆ ಆಕೆಯನ್ನು ಓಕೆ ಮಾಡಲು ಕಾರಣವಂತೆ. ತರುಣ್ ಸುಧೀರ್‍ಗೂ ಇದು ದೊಡ್ಡ ಚಾಲೆಂಜ್. ದರ್ಶನ್, ವಿನೋದ್ ಪ್ರಭಾಕರ್, ದೇವರಾಜ್, ಜಗಪತಿ ಬಾಬು, ರವಿಶಂಕರ್‍ರಂತಹ ದಿಗ್ಗಜರನ್ನು ಹ್ಯಾಂಡಲ್ ಮಾಡೋದು ಸುಲಭದ ವಿಷಯ ಅಲ್ಲ. ನಿರ್ಮಾಪಕ ಉಮಾಪತಿಯವರಂತೂ ದೊಡ್ಡ ಚಾಲೆಂಜ್‍ನ್ನೇ ತೆಗೆದುಕೊಂಡಿದ್ದಾರೆ. ಅವರೆಲ್ಲರ ಶ್ರಮಕ್ಕೆ ಮಾರ್ಚ್ 11ರಂದು ಪ್ರೇಕ್ಷಕರ ರೆಸ್ಪಾನ್ಸ್‍ನಲ್ಲಿ ಬೆಲೆ ಸಿಗಲಿದೆ.