2016ರಲ್ಲಿ ದರ್ಶನ್ ಉಮಾಪತಿ ಭೇಟಿ
2017ರಲ್ಲಿ ತರುಣ್ ಸುದೀರ್ ಫೈನಲ್
2018ರಲ್ಲಿ ಕಥೆಗೆ ಗ್ರೀನ್ ಸಿಗ್ನಲ್
2019ರಲ್ಲಿ ಶೂಟಿಂಗ್ ಶುರು, 2020ರಲ್ಲಿ ಕಂಪ್ಲೀಟ್
2021ರಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ..
ರಾಬರ್ಟ್ ಸಿನಿಮಾದ ಈ ಸುದೀರ್ಘ ಜರ್ನಿಯನ್ನು ಬಿಚ್ಚಿಟ್ಟಿದ್ದಾರೆ ನಿರ್ಮಾಪಕ ಉಮಾಪತಿ. ಚಿತ್ರದ ಹೀರೋ ದರ್ಶನ್ ಆಗಲೀ, ನಿರ್ದೇಶಕ ತರುಣ್ ಸುಧೀರ್ ಆಗಲೀ.. ಪ್ರತಿ ಹಂತದಲ್ಲೂ ಹೇಳುತ್ತಿರೋ ಮಾತು ಉಮಾಪತಿಯವರ ವರ್ಚಸ್ಸು ಹೆಚ್ಚಿಸಿರೋದು ಸುಳ್ಳಲ್ಲ.
ಈ ಚಿತ್ರದ ನಿರ್ಮಾಪಕ ಉಮಾಪತಿ ಚಿತ್ರದ ಮೊದಲ ಹೀರೋ ಎಂದಿದ್ದರು ದರ್ಶನ್. ಅದನ್ನು ಯೆಸ್ ಎಂದಿದ್ದರು ತರುಣ್. ಏಕೆಂದರೆ 2020ರಲ್ಲಿ ಕಂಪ್ಲೀಟ್ ಆದ ಚಿತ್ರಕ್ಕೆ ಒಟಿಟಿಯಿಂದ ಒಳ್ಳೆಯ ಡಿಮ್ಯಾಂಡ್ ಬಂದರೂ ರಿಲೀಸ್ ಮಾಡದೆ ತಡೆದಿದ್ದ ಉಮಾಪತಿ, ಈಗ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಮಾರ್ಚ್ 11ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಈ ವೇಳೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಬರ್ಟ್ ಚಿತ್ರದ 5 ವರ್ಷದ ಜರ್ನಿಯನ್ನು ಚುಟುಕಾಗಿ ಬಿಚ್ಚಿಟ್ಟಿದ್ದಾರೆ ಉಮಾಪತಿ.