` ದೃಶ್ಯಂ 2 ಕನ್ನಡದಲ್ಲಿ ರೀಮೇಕ್ ಮಾಡ್ತಾರಾ ರವಿಚಂದ್ರನ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ದೃಶ್ಯಂ 2 ಕನ್ನಡದಲ್ಲಿ ರೀಮೇಕ್ ಮಾಡ್ತಾರಾ ರವಿಚಂದ್ರನ್..?
Ravichandran; Drishyam 2 Movie Image

ದೃಶ್ಯ, ಮೂಲತಃ ಮಲಯಾಳಂ ಸಿನಿಮಾ. ಜೀತು ಜೋಸೆಫ್ ನಿರ್ದೇಶನದ ಆ ಸಿನಿಮಾ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಟ್ರೆಂಡ್ ಸೃಷ್ಟಿಸಿದ್ದು ಸುಳ್ಳಲ್ಲ. ಕನ್ನಡ, ತೆಲುಗು, ತಮಿಳು, ಹಿಂದಿ ಅಷ್ಟೇ ಏಕೆ, ಚೈನೀಸ್ ಭಾಷೆಯಲ್ಲೂ ರೀಮೇಕ್ ಆಗಿ ಗೆದ್ದ ಚಿತ್ರವಿದು. ಈಗ ದೃಶ್ಯಂ 2 ರಿಲೀಸ್ ಆಗಿ ಒಟಿಟಿಯಲ್ಲಿ ಮೋಡಿ ಮಾಡಿದೆ.

20 ಕೋಟಿ ಬಜೆಟ್‍ನಲ್ಲಿ ತಯಾರಾದ ದೃಶ್ಯಂ 2, ಈಗಾಗಲೇ 45 ಕೋಟಿಗೂ ಹೆಚ್ಚು ಲಾಭದಲ್ಲಿದೆ. ಇನ್ನೂ ಹೆಚ್ಚು ಲಾಭ ಗಳಿಸುವ ಸೂಚನೆಗಳೂ ಇವೆ.

ಹೀಗಿರುವಾಗ ಎಲ್ಲರ ಕಣ್ಣೂ ರವಿಚಂದ್ರನ್ ಅವರತ್ತ ನೆಟ್ಟಿರೋದು ಸುಳ್ಳಲ್ಲ. ಕನ್ನಡದಲ್ಲಿ ದೃಶ್ಯ ರೀಮೇಕ್‍ನಲ್ಲಿ ನಟಿಸಿದ್ದವರು ರವಿಚಂದ್ರನ್. ಪಿ.ವಾಸು ಡೈರೆಕ್ಷನ್‍ನಲ್ಲಿ ಇ4 ಸಂಸ್ಥೆ ನಿರ್ಮಾಣ ಮಾಡಿತ್ತು. ರವಿಚಂದ್ರನ್‍ಗೆ ಮತ್ತೊಮ್ಮೆ ಹಿಟ್ ಪರಿಚಯಿಸಿದ ಸಿನಿಮಾ ಅದು. ಆ ಸಿನಿಮಾವನ್ನು ರವಿಚಂದ್ರನ್ ರೀಮೇಕ್ ಮಾಡಲಿ ಅನ್ನೋ ಕೂಗು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ವಿಶೇಷವೆಂದರೆ ಮಲಯಾಳಂನಲ್ಲಿ ಸಿನಿಮಾ ನೋಡಿ ಮೆಚ್ಚಿದವರೇ ಇದನ್ನು ಕನ್ನಡದಲ್ಲಿ ರೀಮೇಕ್ ಮಾಡಬೇಕು, ಮತ್ತು ಅದರಲ್ಲಿ ರವಿಚಂದ್ರನ್ ಅವರೇ ನಟಿಸಬೇಕು ಎನ್ನುತ್ತಿರೋದು.

ಇ4 ಸಂಸ್ಥೆ ಕೇಳಿಸಿಕೊಳ್ಳುತ್ತಾ..? ಅಥವಾ ರವಿಚಂದ್ರನ್ ಅವರೇ ಮನಸ್ಸು ಮಾಡ್ತಾರಾ..?