ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ.. ರಾಬರ್ಟ್ ಚಿತ್ರದ ಮೊದಲ ವಿಡಿಯೋ ಸಾಂಗ್ ಇದು. ಹಾಡು ರಿಲೀಸ್ ಆಗುತ್ತಿದ್ದಂತೆ, ಎಂದಿನಂತೆ ವ್ಯೂವ್ಸ್.. ಹಿಟ್ಸ್.. ದಾಖಲೆ.. ನಿರ್ಮಾಣವಾಗುತ್ತಿದೆ. ಆದರೆ.. ಅವೆಲ್ಲಕ್ಕಿಂತ ದರ್ಶನ್ ಫ್ಯಾನ್ಸ್ ಥ್ರಿಲ್ಲಾಗಿರೋದು ದರ್ಶನ್ ಹಾಕಿರೋ ಸ್ಟೆಪ್ಪುಗಳಿಗೆ. ಸಾಧಾರಣವಾಗಿ ದರ್ಶನ್ ಡ್ಯಾನ್ಸುಗಳಿಂದ ದೂರ. ನಾನು ಒಳ್ಳೆಯ ಡ್ಯಾನ್ಸರ್ ಅಲ್ಲ ಎಂದು ಓಪನ್ ಆಗಿಯೇ ಹೇಳಿಕೊಳ್ಳೋ ದರ್ಶನ್, ಸಿಂಪಲ್ ಡ್ಯಾನ್ಸ್ ಸ್ಟೆಪ್ಪುಗಳನ್ನಷ್ಟೇ ಹಾಕ್ತಾರೆ. ಆದರೆ.. ರಾಬರ್ಟ್ ಚಿತ್ರದ ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ.. ಹಾಡಿನಲ್ಲಿ ಮಾತ್ರ ದರ್ಶನ್ ಮೈಚಳಿ ಬಿಟ್ಟು ಕುಣಿದಿದ್ದಾರೆ.
ಬಾಲಿವುಡ್ ಗಾಯಕ ನಕಾಶ್ ಅಜೀಜ್ ಮತ್ತು ಐಶ್ವರ್ಯಾ ರಂಗರಾಜನ್ ಹಾಡಿರೋ ಹಾಡಿಗೆ ಸಾಹಿತ್ಯ ಭರ್ಜರಿ ಚೇತನ್ ಕುಮಾರ್ ಅವರದ್ದು. ಕೊರಿಯೋಗ್ರಫಿಯೂ ಸಖತ್ತಾಗಿದ್ದು, ಜನ್ಯ ಬೀಟ್ಸ್‍ಗಳಿಗೆ ಅಷ್ಟೇ ಸೂಪರ್ಬ್ ಆಗಿ ಕೈಜೋಡಿಸಿದ್ದಾರೆ ಕೊರಿಯೋಗ್ರಫರ್ ಭುವನ್. ತರುಣ್ ಸುಧೀರ್ ನಿರ್ದೇಶನದ ಸಿನಿಮಾ, ಮಾರ್ಚ್ 11ರಂದು ರಿಲೀಸ್ ಆಗುತ್ತಿದೆ. ಸಿನಿಮಾಗೆ ರಿಲೀಸ್‍ಗೂ ಮೊದಲೇ ಸಿಗುತ್ತಿರೋ ರೆಸ್ಪಾನ್ಸ್‍ಗೆ ಫುಲ್ ಥ್ರಿಲ್ಲಾಗಿರೋದು ನಿರ್ಮಾಪಕ ಉಮಾಪತಿ.