ಹೀರೋ. ರಿಷಬ್ ಶೆಟ್ಟಿ ಬ್ಯಾನರಿನ ಹೊಸ ಸಿನಿಮಾ. ಮಾರ್ಚ್ 5ಕ್ಕೆ ರಿಲೀಸ್ ಆಗುತ್ತಿರೋ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇರೋದು ಎರಡು ಕಾರಣಕ್ಕೆ. ಇದು ಬೆಲ್‍ಬಾಟಂ ನಂತರ ರಿಷಬ್ ಶೆಟ್ಟಿ ಮತ್ತೆ ನಾಯಕನಾಗಿ ನಟಿಸಿರೋ ಸಿನಿಮಾ ಎನ್ನುವುದು ಒಂದಾದ್ರೆ, ಎರಡನೆಯದು ಚಿತ್ರದ ಟ್ರೇಲರ್.
ಒಂದು ಸಿನಿಮಾದಲ್ಲಿ ಏನೇನೆಲ್ಲ ಇರಬಹುದೋ.. ಅದೆಲ್ಲವನ್ನೂ ಟ್ರೇಲರಿನಲ್ಲಿಯೇ ಕೊಟ್ಟಿರೋದು ಹೀರೋ ಚಿತ್ರದ ಪ್ಲಸ್ ಪಾಯಿಂಟ್. ಅಲ್ಲಿ ಕಾಮಿಡಿ, ಸಸ್ಪೆನ್ಸ್, ಥ್ರಿಲ್, ಹಾರರ್, ಲವ್.. ಎಲ್ಲವನ್ನೂ ಇಟ್ಟಿದ್ದಾರೆ. ಆದರೆ.. ಯಾವುದನ್ನೂ ಬಿಟ್ಟುಕೊಟ್ಟಿಲ್ಲ. ಕುತೂಹಲವನ್ನು ಕಾಯ್ದಿರಿಸಿದ್ದಾರೆ ರಿಷಬ್ ಶೆಟ್ಟಿ.
ಅಂದಹಾಗೆ ಈ ಚಿತ್ರಕ್ಕೆ ರಿಷಬ್ ಹೀರೋ ಮತ್ತು ನಿರ್ಮಾಪಕ ಮಾತ್ರ. ಅವರ ಜೊತೆಯಲ್ಲೇ ಇದ್ದ ಭರತ್ ರಾಜ್ ನಿರ್ದೇಶಕ. ಆದರೆ ಕಥೆಯಲ್ಲಿ ರಿಷಬ್ ಶೆಟ್ಟಿ ಪಾತ್ರವೂ ಇದೆ. ಗಾನವಿ ಲಕ್ಷ್ಮಣ್ ಹೀರೋಯಿನ್. ರಿಷಬ್ ಅವರ ಫೇವರಿಟ್ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಜಯಣ್ಣ ಕಂಬೈನ್ಸ್ ಮೂಲಕ ರಿಲೀಸ್ ಆಗುತ್ತಿರೋ ಸಿನಿಮಾ, ಬೆಲ್‍ಬಾಟಂನ್ನೂ ಮೀರಿದ ಯಶಸ್ಸು ಕಾಣಲಿದೆ ಎನ್ನುವುದು ಚಿತ್ರ ನೋಡಿದವರ ಮಾತು.