ರವಿಚಂದ್ರನ್ ಅವರ ಅಪೂರ್ವ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಅಪೂರ್ವ, ಈಗ ಕಾಲಾಪತ್ಥರ್ ಜೊತೆಯಾಗಿದ್ದಾರೆ. ಕೆಂಡಸಂಪಿಗೆ, ಕಾಲೇಜ್ ಕುಮಾರ ಖ್ಯಾತಿಯ ವಿಕ್ಕಿ ವರುಣ್ ನಟಿಸಿರುವ ಚಿತ್ರಕ್ಕೆ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್ ಕಥೆ ಇದೆ. ರಕ್ಷಿತ್ ಶೆಟ್ಟಿ ಟೀಂನಲ್ಲಿದ್ದ ಚೇತನ್, ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಅಪೂರ್ವ ಈ ಸಿನಿಮಾದಲ್ಲಿ ಚಿಕ್ಕ ಮಕ್ಕಳಿಗೆ ಪಾಠ ಹೇಳೋ ಟೀಚರ್ ಆಗಿದ್ದಾರೆ. ಕಥೆ ಇಷ್ಟವಾಯ್ತು. ಗ್ಲಾಮರ್ ಪಾತ್ರಗಳಲ್ಲೇ ನಟಿಸಿದ್ದ ನನಗೆ ಈ ಚಿತ್ರದಲ್ಲಿ ಡಿ ಗ್ಲಾಮ್ ರೋಲ್ ಇದೆ. ಹಳ್ಳಿಯೊಂದರ ಸ್ವಾಭಿಮಾನಿ ಹುಡುಗಿಯ ಪಾತ್ರ ನನ್ನದು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಅಪೂರ್ವ. ನವೀನ್ ನಿರ್ಮಾಣದ ಚಿತ್ರದ ಚಿತ್ರೀಕರಣ, ಮುಂದಿನ ತಿಂಗಳಿಂದ ಶುರುವಾಗಲಿದೆ.