` ಫರ್ಹಾನ್ ಅಖ್ತರ್ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಫರ್ಹಾನ್ ಅಖ್ತರ್ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್
Yudhra, Ravi Basrur Image

ರವಿ ಬಸ್ರೂರು, ಕೆಜಿಎಫ್ನಿಂದ ಖ್ಯಾತಿ ಪಡೆದ ಸಂಗೀತ ನಿರ್ದೇಶಕ. ಅವರೀಗ ಬಾಲಿವುಡ್ನ್ನೂ ಟಚ್ ಮಾಡಿದ್ದಾರೆ. ಹಿಂದಿಯಲ್ಲಿ ಬಾಲಿವುಡ್ನ ಖ್ಯಾತ ನಿರ್ಮಾಕರೂ ಆಗಿರುವ ಫರ್ಹಾನ್ ಅಖ್ತರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಬಾಲಿವುಡ್ನ ಯುಧ್ರಾ ಅನ್ನೋ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶಕ. ಗಲ್ಲಿಭಾಯ್ ಖ್ಯಾತಿಯ ಸಿದ್ಧಾಂತ್ ಹೀರೋ ಆಗಿದ್ದರೆ, ಮಾಸ್ಟರ್ ಖ್ಯಾತಿಯ ಮಾಳವಿಕಾ ಹೀರೋಯಿನ್. ಫರ್ಹಾನ್ ಅಖ್ತರ್ ನಿರ್ಮಾಪಕ. ಕೆಜಿಎಫ್ನ್ನು ಹಿಂದಿಯಲ್ಲಿ ಪ್ರಮೋಟ್ ಮಾಡಿದ್ದು ಇದೇ ಪರ್ಹಾನ್ ಅಖ್ತರ್ ಅನ್ನೋದನ್ನು ಮರೆಯುವಂತಿಲ್ಲ.

ನನಗೆ ಎಲ್ಲ ಚಿತ್ರಗಳೂ ಒಂದೇ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಭಗವಂತ ಕೊಟ್ಟಿದ್ದನ್ನು ಚೆನ್ನಾಗಿ ನಿರ್ವಹಿಸಬೇಕು. ದೊಡ್ಡ ಚಿತ್ರ, ಚಿಕ್ಕ ಚಿತ್ರ ಅಂತೆಲ್ಲ ಏನಿಲ್ಲ ಎಂದಿದ್ದಾರೆ ರವಿ ಬಸ್ರೂರು.