` ರಾಬರ್ಟ್ ಟ್ರೇಲರ್ : ದಾಖಲೆಗಳಿಗೆಲ್ಲ ಬಾಸು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ರಾಬರ್ಟ್ ಟ್ರೇಲರ್ : ದಾಖಲೆಗಳಿಗೆಲ್ಲ ಬಾಸು
Roberrt Movie Image

ಅದು ಅಭಿಮಾನಿಗಳೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಕ್ಷಣ. ಹೀಗಾಗಿಯೇ ದರ್ಶನ್ ಹುಟ್ಟುಹಬ್ಬಕ್ಕೆಂದು ರಿಲೀಸ್ ಆದ ರಾಬರ್ಟ್ ಟ್ರೇಲರ್ ಹವಾ ಎಬ್ಬಿಸಿದೆ. ಟ್ರೇಲರ್ನ ಒಂದೊಂದು ಡೈಲಾಗುಗಳೂ ಶಿಳ್ಳೆ ಹೊಡೆಸಿಕೊಳ್ಳುತ್ತಿವೆ.

ಒಬ್ಬರ ಲೈಫ್ನಲ್ಲಿ ಹೀರೋ ಆಗಬೇಕು ಅಂದ್ರೆ, ಇನ್ನೊಬ್ಬರ ಲೈಫಿನಲ್ಲಿ ವಿಲನ್ ಆಗಲೇಬೇಕು..

ನಾವು ನೋಡೋಕೆ ಮಾತ್ರ ಕ್ಲಾಸು. ವಾರ್ಗೆ ಇಳಿದ್ರೆ ಫುಲ್ ಮಾಸು..

ಏ ತುಕಾಲಿ.. ನೀನು ಮಾಸ್ ಆದ್ರೆ, ನಾನು ಮಾಸ್ಗೇ ಬಾಸು..

ಈ ಕೈಗೆ ಶಬರಿ ಮುಂದೆ ಸೋಲೋದೂ ಗೊತ್ತು. ರಾವಣನ ಎದುರು ಗೆಲ್ಲೋದೂ ಗೊತ್ತು..

ಡೈಲಾಗುಗಳು ಅಭಿಮಾನಿಗಳ ಹೃದಯದಲ್ಲಿ ಅಕ್ಷರಶಃ ಕಿಚ್ಚೆಬ್ಬಿಸಿವೆ. ಉಮಾಪತಿ ನಿರ್ಮಾಣದ ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದೆ. ಆಶಾಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ಸೋನಲ್ ಮಂಥೆರೋ, ಅವಿನಾಶ್, ರವಿ ಕಿಶನ್.. ಹೀಗೆ ಭರ್ಜರಿ ತಾರಾಗಣ ಇರೋ ಚಿತ್ರದ ಟ್ರೇಲರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ ಮಾರ್ಚ್ 11ಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.