ಕಿರಾತಕ ಚಿತ್ರದಲ್ಲಿ ನಟಿಸಿದ್ದ ನಟಿ ಓವಿಯಾ ಹೆಲನ್ ಈಗ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆಲ್ಲ ಕಾರಣವಾಗಿದ್ದು ಒಂದೇ ಒಂದು ಟ್ವೀಟ್.
ಇತ್ತೀಚೆಗೆ ಮೋದಿ ತಮಿಳುನಾಡಿಗೆ ಹೋಗಿದ್ದಾಗ, ಗೋಬ್ಯಾಕ್‍ಮೋದಿ ಅನ್ನೋ ಟ್ವಿಟರ್ ಅಭಿಯಾನ ನಡೆದಿತ್ತು. ಆಗ ಈ ಓವಿಯಾ ಕೂಡಾ ಟ್ವೀಟ್ ಮಾಡಿದ್ದರು. ಅದಕ್ಕೆ ಸುಮಾರು 20 ಸಾವಿರ ರೀ-ಟ್ವೀಟು, 60 ಸಾವಿರ ಲೈಕುಗಳೂ ಬಿದ್ದಿದ್ದವು. ಈಗ ಅವರ ವಿರುದ್ಧ ಮೋದಿ ಅಭಿಮಾನಿಗಳು ಕೇಸ್ ಹಾಕಿದ್ದಾರೆ.
ದೇಶದ ಪ್ರಧಾನಿಯನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಅನ್ನೋದು ಬಿಜೆಪಿ ಕಾರ್ಯಕರ್ತರ ಆಗ್ರಹ.
ಸದ್ಯಕ್ಕೆ ಓವಿಯಾ ವಿರುದ್ಧ ಐಟಿ ಕಾಯ್ದೆ 69ಎ, 124ಎ, 153ಎ, 294 ಅಡಿ ಕೇಸು ದಾಖಲಿಸಲಾಗಿದೆ.