` ವಾಲ್ಮೀಕಿ ರತ್ನ ಸುದೀಪ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಾಲ್ಮೀಕಿ ರತ್ನ ಸುದೀಪ್
Sudeep Image

ಅಭಿನಯದ ಚಕ್ರವತಿ, ಕನ್ನಡ ಕಲಾ ತಿಲಕ, ಕಿಚ್ಚ ಸುದೀಪ್ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಾವಣಗೆರೆಯಲ್ಲಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಸುದೀಪ್ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ವಾಲ್ಮೀಕಿ ಸಮುದಾಯದ ಗುರು ಪ್ರಸನ್ನಾನಂದ ಸ್ವಾಮೀಜಿ ಸುದೀಪ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ವಾಲ್ಮೀಕಿ ಜಾತ್ರೆಯಲ್ಲಿ ಈ ಬಾರಿ ಸುದೀಪ್ ಬರುತ್ತಾರೆ ಎಂಬ ಕಾರಣಕ್ಕೇ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಪೊಲೀಸರನ್ನೂ ಕೇರ್ ಮಾಡಲಿಲ್ಲ. ಲಾಠಿ ಚಾರ್ಜ್‍ಗೂ ಬಗ್ಗಲಿಲ್ಲ. ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳ ಎದುರು ಪೊಲೀಸರೇ ಸುಮ್ಮನಾಗಬೇಕಾಯ್ತು. ಅಭಿಮಾನಿಯೊಬ್ಬ ಹೆಲಿಪ್ಯಾಡ್‍ಗೆ ನುಗ್ಗಿದ ಕಾರಣ, ಹೆಲಿಕಾಪ್ಟರ್ ಹಾರಾಟವೂ ಅರ್ಧ ತಾಸು ವಿಳಂಬವಾಯ್ತು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery